SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಿಗೆ ಕೊಲೆ ಬೆದರಿಕೆ: ಖಂಡನೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರೂ, ಬಂಟ್ವಾಳ ಪುರಸಭಾ ಸದಸ್ಯರೂ, ಸಾಮಾಜಿಕ ಹೋರಾಟಗಾರ ಮೂನಿಷ್ ಆಲಿ ಅವರಿಗೆ ಸಮಾಜ ಘಾತುಕ ಶಕ್ತಿಗಳಿಂದ ಕೊಲೆ ಬೆದರಿಕೆ ಬಂದಿದ್ದು, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸೂಕ್ತವಾಗಿ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisement -

ಇದರ ಗಾಂಭೀರ್ಯತೆಯನ್ನು ಅರಿತು ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸುವ ಮೂಲಕ ಇದರ ಹಿಂದೆ ಇರುವ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಕೊಲೆ ಬೆದರಿಕೆ ಪತ್ರದ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ಮೂನೀಶ್ ಅಲಿ ದೂರು ನೀಡಿದ್ದಾರೆ.

- Advertisement -

ಫೆಬ್ರವರಿ 17ರಂದು ಅಂಚೆ ಮೂಲಕ ಭಜರಂಗ ದಳದ ಕಾರ್ಯಕರ್ತರು ಎಂಬ ಹೆಸರಿನಲ್ಲಿ ಕೊಲೆ ಬೆದರಿಕೆ ಪತ್ರ ಕಚೇರಿಯ ವಿಳಾಸಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಬಂಟ್ವಾಳದ ಕಾಲೇಜು ಒಂದರ ಅಂತಿಮ ವರ್ಷದ ಬಿ.ಎಸ್ಸಿ ಪದವಿ ವಿದ್ಯಾರ್ಥಿಗಳಾದ ನಿತೇಶ್ ಕೆ., ಜಿತೇಶ್ ಕೆ., ವಿಠಲ ನಾಯ್ಕ, ಜೇಸಿ ಪಿಂಟೋ ಅವರ ಮಗನಾದ ಕೌಶಿಕ್ ಪಿಂಟೋ, ಮೇಕನ್ ಪಿಂಟೋ ಕನಪಾಡಿ, ರಾಗನ್ ಪಿಂಟೋ ಕನಪಾಡಿ ಮತ್ತು ಲೋಕೇಶ್ (ಹರೀಶ್) ಎಂಬವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅಶ್ರಫ್‌ ಕಲಾಯಿಯನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸುತ್ತೇವೆ ಎಂದು ಬೆದರಿಕೆ

ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಪತ್ರ ಬರೆದಿರುವ ಕಿಡಿಗೇಡಿಗಳು, 2017ರಲ್ಲಿ ಕೊಲೆಯಾದ ಅಶ್ರಫ್‌ ಕಲಾಯಿಯನ್ನು ಕಳುಹಿಸಿದ ಜಾಗಕ್ಕೆ ನಿನ್ನನ್ನೂ ಕಳುಹಿಸಲಾಗುವುದು. ಅಲ್ಲದೆ ನಿನ್ನ ಕಚೇರಿಗೆ ಬಾಂಬ್ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಮುನೀಶ್ ಅಲಿ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp