►ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ 15 ನೇ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪಶುವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಆಯ್ದ 20 ತಾಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ ಗಳನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂ. ಅನುದಾನ ನೀಡಲಾಗುವುದು.’
• ಶಿಕ್ಷಣ ಇಲಾಖೆ: 44,422 ಕೋಟಿ ರೂಪಾಯಿ
• ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 34,406 ಕೋಟಿ ರೂ.
• ಇಂಧನ ಇಲಾಖೆ: 23,159 ಕೋಟಿ ರೂಪಾಯಿ
• ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: 21,160 ಕೋಟಿ ರೂಪಾಯಿ
• ಗೃಹ ಮತ್ತು ಸಾರಿಗೆ ಇಲಾಖೆ: 19,777 ಕೋಟಿ ರೂಪಾಯಿ
• ನೀರಾವರಿ ಇಲಾಖೆ: 19,179 ಕೋಟಿ ರೂಪಾಯಿ
• ನಗರಾಭಿವೃದ್ಧಿ ಇಲಾಖೆ: 18,155 ಕೋಟಿ ರೂಪಾಯಿ
• ಕಂದಾಯ ಇಲಾಖೆ: 16,170 ಕೋಟಿ ರೂಪಾಯಿ
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 15,145 ಕೋಟಿ ರೂ.
• ಸಮಾಜ ಕಲ್ಯಾಣ ಇಲಾಖೆ: 13,334 ಕೋಟಿ ರೂಪಾಯಿ
• ಲೋಕೋಪಯೋಗಿ ಇಲಾಖೆ: 10,424 ಕೋಟಿ ರೂಪಾಯಿ
• ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: 9,963 ಕೋಟಿ ರೂ.
• ಕೃಷಿ ಮತ್ತು ತೋಟಗಾರಿಕೆ ಇಲಾಖೆ: 6,688 ಕೋಟಿ ರೂ.
• ಮೀನುಗಾರಿಕೆ ಮತ್ತು ಪಶುಸಂಗೋಪನೆ: 3,307 ಕೋಟಿ ರೂ.
• ಇತರ ಇಲಾಖೆಗಳಿಗೆ 1,24,593 ಕೋಟಿ ರೂಪಾಯಿ ಅನುದಾನ