ಫೆ.16ರವರೆಗೆ ಪಂಜಾಬ್ ನ ಕೆಲ ಭಾಗಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

Prasthutha|

ಚಂಡೀಗಢ: ಪಂಜಾಬ್ ನ ಪಟಿಯಾಲ, ಸಂಗ್ರೂರ್ ಮತ್ತು ಫತೇಘರ್ ಸಾಹಿಬ್ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಫೆಬ್ರುವರಿ 16ರವರೆಗೆ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ‘ದೆಹಲಿ ಚಲೋ’ ಮೆರವಣಿಗೆ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಆದೇಶ ನೀಡಿದೆ.

- Advertisement -


ಸಚಿವಾಲಯದ ಆದೇಶದ ಪ್ರಕಾರ, ಪಟಿಯಾಲದ ಶತ್ರನಾ, ಸಮನಾ, ಘನೌರ್, ದೇವಿಗಢ ಮತ್ತು ಬಲ್ಭೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ, ಖಾನೌರಿ, ಮೂನಾಕ್, ಲೆಹ್ರಾ, ಸುನಮ್, ಸಂಗ್ರೂರ್ನ ಚಾಜ್ಲಿ ಮತ್ತು ಫತೇಘರ್ ಸಾಹಿಬ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.



Join Whatsapp