ಪರುಶುರಾಮ ಥೀಂ ಪಾರ್ಕ್‌ ಪ್ರಕರಣದ ನಿಜವಾದ ಕಳ್ಳರನ್ನು ಸರಕಾರ ಹಿಡಿಯಲಿದೆ: ತಂಗಡಗಿ

Prasthutha|

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೈಲೂರು ಉಮಿಕಲ್‌ ಬೆಟ್ಟದಲ್ಲಿ ಪರುಶುರಾಮ ಥೀಂ ಪಾರ್ಕ್‌ ನಿರ್ಮಾಣ ಕಾಮಗಾರಿಯ ಅವ್ಯವಹಾರದಲ್ಲಿ ಪಾಲ್ಗೊಂಡಿರುವ ನಿಜವಾದ ಕಳ್ಳರನ್ನು ಸರಕಾರ ಕಂಡು ಹಿಡಿಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

- Advertisement -

ಈಗಾಗಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿಗೆ ವಹಿಸಲು ಮುಂದಾಗಿದ್ದಾರೆ. ದೇವರ ಹೆಸರು ಹೇಳಿಕೊಂಡು ಕಳ್ಳತನ ಮಾಡಿದವರ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಅವರು ವಿಧಾನಪರಿಷತ್‌ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರನ್ನು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ಆಗಿದೆ. ಇದು ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಕೆಲಸ. ಆದರೆ ಸ್ಥಳೀಯರು ಈ ಬಗ್ಗೆ ಸರಕಾರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನಮ್ಮ ಸರಕಾರ ಅದನ್ನು ಹೊರಗೆಳೆಯುವ ಕೆಲಸಕ್ಕೆ ಮುಂದಾಗಿದೆ. ದೇವರ ಹೆಸರು ಹೇಳಿಕೊಂಡು ಹಣ ಮಾಡುವ ಕೆಲಸಕ್ಕಿಳಿದರವನ್ನು ಸರಕಾರ ಪತ್ತೆ ಹಚ್ಚಲಿದೆ ಎಂದರು.

- Advertisement -

ದೇವರು ಹೊತ್ತುಕೊಂಡವರಿಂದ ದುಡ್ಡು ಹೊಡೆಯುವ ಕೆಲಸ ನಡೆದಿದೆ ಎಂಬ ಸಚಿವರ ಮಾತಿಗೆ ಬಿಜೆಪಿಯ ಭಾರತಿ ಶೆಟ್ಟಿ, ಪ್ರತಾಪ್‌ ಸಿಂಹ ನಾಯಕ್‌, ಗೋವಿಂದರಾಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



Join Whatsapp