ನ್ಯೂಯಾರ್ಕ್: ಫೆ.5ರಂದು ಅಮೆರಿಕದ ಇಂಡಿಯಾನಾದಲ್ಲಿ 23 ವರ್ಷದ ಭಾರತೀಯ ಮೂಲದ ಸಮೀರ್ ಕಾಮತ್ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟ ಘಟನೆ ನಡೆದಿತ್ತು. ಪ್ರಾಥಮಿಕ ತನಿಖೆ ನಡೆಸಿರುವ ಅಮೆರಿಕದ ಅಧಿಕಾರಿಗಳು, ಸಮೀರ್ ಕಾಮತ್ ಕೊಲಡಯಾಗಿಲ್ಲ, ತಾನೇ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪರ್ಡ್ನೂ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದ ಸಮೀರ್ ಕಾಮತ್ ಮೃತದೇಹ, ಇಂಡಿಯಾನಾದ ವಿಲಿಯಮ್ನ್ಪೋರ್ಟ್ನ ಅರಣ್ಯ ಪ್ರದೇಶದಲ್ಲಿ ಫೆ.5ರಂದು ಸಂಜೆ 5 ಗಂಟೆ ಸುಮಾರಿಗೆ ಪತ್ತೆಯಾಗಿತ್ತು. ಭಾರತದಲ್ಲಿ ಇದು ಆಕ್ರೋಶ ಸೃಷ್ಟಿಸಿತ್ತು. ಸಮೀರ್ ಮನೆಯವರು ಭಾರತ ಸರಕಾರಕ್ಕೆ ಈ ಕುರಿತು ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದರು.