ಮಂಗಳೂರು: ಷೇರುಗಳಲ್ಲಿ ಹೂಡಿಕೆ ಎಂದು ನಂಬಿಸಿ 57.46 ಲಕ್ಷ ರೂ. ವಂಚನೆ

Prasthutha|

ಮಂಗಳೂರು: ಷೇರುಗಳಲ್ಲಿ ಹೂಡಿಕೆ ಎಂದು ನಂಬಿಸಿ ನಾಲ್ವರಿಂದ ಒಟ್ಟು 57.46 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ನಿಶ್ಚಿತ್‌ ಡಿ’ಸೋಜಾ, ಲ್ಯಾನ್ಸಲ್‌ ಡಿ’ಸೋಜಾ, ನಮಿತಾ ಡಿ’ಸೋಜಾ ಮತ್ತು ಅಮರ್‌ ರಾವ್‌ ವಂಚನೆಗೊಳಗಾಗಿ ಲಕ್ಷಾಂತರ ರೂ. ಕಳಕೊಂಡವರು.

- Advertisement -

ಅಪರಿಚಿತ ವ್ಯಕ್ತಿ ಮೊಬೈಲ್‌ ಸಂಖ್ಯೆ 7252878942 ರಿಂದ ನಿಶ್ಚಿತ್‌ ಅವರಿಗೆ ಕರೆ ಮಾಡಿ Pantheon Group, UK ಕಂಪೆನಿಯಲ್ಲಿ ಷೇರುಗಳನ್ನು ಖರೀದಿಸುವಂತೆ ನಂಬಿಸಿ ಆಯಂಡ್ರಾಯಿಡ್‌ ಅಪ್ಲಿಕೇಶನ್‌ ಒಂದನ್ನು ಇನ್‌ಸ್ಟಾಲ್‌ ಮಾಡುವಂತೆ ಹೇಳಿ ಲಿಂಕ್‌ ಕಳುಹಿಸಿದ್ದಾನೆ.

ನಿಶ್ಚಿತ್‌ ಆಯಪನ್ನು ಡೌನ್‌ಲೋಡ್‌ ಮಾಡಿದ್ದಾರೆ. ಬಳಿಕ ಅದರಲ್ಲಿ ಲಾಗಿನ್‌ ಆಗಿ ಡಿ.18ರಿಂದ ಜ.23ರ ಅವಧಿಯಲ್ಲಿ 32.71 ಲಕ್ಷ ರೂ., ಅವರ ಸ್ನೇಹಿತರಾದ ಲ್ಯಾನ್ಸಲ್‌ ಡಿ’ಸೋಜಾ 8 ಲಕ್ಷ ರೂ, ನಮಿತಾ ಡಿ’ಸೋಜಾ 12 ಲಕ್ಷ ರೂ ಮತ್ತು ಅಮರ್‌ ರಾವ್‌ 4,75,000 ರೂ.ಗಳನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದಾರೆ.

- Advertisement -

ಕೆಲವು ಸಮಯದ ಬಳಿಕ ಹಣವನ್ನು ವಿತ್‌ಡ್ರಾ ಮಾಡಲು ಯತ್ನಿಸಿದಾಗ ವಿತ್‌ಡ್ರಾ ಆಗಲಿಲ್ಲ. ಕೊನೆಗೆ ಅವರಿಗೆ ಇದೊಂದು ಮೋಸದ ಜಾಲ ಎಂಬುದು ಗೊತ್ತಾಗಿದೆ. ಮಂಗಳೂರು ನಗರದ ಸೆನ್‌(ಸೈಬರ್‌, ನಾರ್ಕೊಟಿಕ್‌ ಮತ್ತು ಆರ್ಥಿಕ ಅಪರಾಧ) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತ ಕಳಕೊಂಡ ನಾಲ್ವರು ಕಳಕೊಂಡ ಹಣ ಮರಳಿ ಸಿಗಬಹುದಾ ಎಂದು ಆತಂಕದಲ್ಲಿದ್ದಾರೆ.



Join Whatsapp