ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ: ಬಿಗಿ ಭದ್ರತೆ

Prasthutha|

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಇಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಭಾರಿ ಭದ್ರತೆ ಏರ್ಪಡಿಸಲಾಗಿದೆ.

- Advertisement -

ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ. ಚುನಾವಣೆ ಇರುವ ಕಾರಣ ದೇಶದಾದ್ಯಂತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಪಾಕಿಸ್ತಾನದ ನ್ಯಾಷನಲ್‌ ಅಸೆಂಬ್ಲಿಯು ಒಟ್ಟು 336 ಸ್ಥಾನಗಳನ್ನು ಒಳಗೊಂಡಿದ್ದು, ಒಂದು ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಕೊಲೆಯಾದ ಕಾರಣ ಅಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ. 60 ಸ್ಥಾನಗಳನ್ನು ಮಹಿಳೆಯರಿಗೆ ಹಾಗೂ 10 ಸ್ಥಾನಗಳನ್ನು ಮುಸ್ಲಿಮೇತರರಿಗೆ ಮೀಸಲಿಡಲಾಗಿದೆ.

- Advertisement -

ಇದೇ ಸಂದರ್ಭದಲ್ಲಿ ನಾಲ್ಕು ಪ್ರಾಂತ್ಯಗಳ 593 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, 12,695 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಚುನಾವಣಾ ಮುನ್ನಾ ದಿನವೇ ಅವಳಿ ಬಾಂಬ್ ಸ್ಫೋಟ ನಡೆದಿರುವ ಕಾರಣ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ದೇಶದಾದ್ಯಂತ 650000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಯೋತ್ಪಾದಕರಿಂದ ದಾಳಿ ನಡೆಸುವ ಬೆದರಿಕೆ ಇರುವುದರಿಂದ ಪೊಲೀಸ್‌ ಅರೆಸೇನಾ ಪಡೆ ಮತ್ತು ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಬುಧವಾರ ಸುಮಾರು 90000ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಚುನಾವಣಾ ಪರಿಕರಗಳನ್ನು ಸಾಗಿಸಲಾಗಿದೆ. 29985 ಮತಗಳಟ್ಟೆಗಳನ್ನು ‘ಅತ್ಯಂತ ಸೂಕ್ಷ್ಮ’ ಎಂದು ಪರಿಗಣಿಸಲಾಗಿದೆ.

ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೈಲಿನಲ್ಲಿ ಇರುವ ಕಾರಣ ಮಾಜಿ ಪ್ರಧಾನಿ ನವಾಝಾ ಷರೀಫ್‌ ಅವರ ಪಾಕಿಸ್ತಾನ್‌ ಮುಸ್ಲಿಂ ಲೀಗ್‌-ನವಾಜ್(ಪಿಎಂಎಲ್‌-ಎನ್‌) ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ.

Join Whatsapp