ಭಾರತ್ ನ್ಯಾಯ ಯಾತ್ರೆಗೆ ಆಹ್ವಾನ: ಭಾಗಿಯಾಗುತ್ತೇನೆಂದ ಅಖಿಲೇಶ್ ಯಾದವ್

Prasthutha|

ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಲು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ಗೆ ಆಹ್ವಾನ ನೀಡಲಾಗಿದೆ. ಯಾತ್ರೆ ಫೆ.16 ರಂದು ಉತ್ತರ ಪ್ರದೇಶಕ್ಕೆ ಆಗಮಿಸಲಿದ್ದು, ಅಮೇಥಿ ಅಥವಾ ರಾಯ್ ಬರೇಲಿಯಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ ಎಂದು ಅಖಿಲೇಶ್ ಯಾದವ್ ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾತ್ರೆಯಲ್ಲಿ ಭಾಗವಹಿಸಲು ನೀಡಿದ ಆಹ್ವಾನವನ್ನು ಸ್ವೀಕರಿಸಿದ ಅಖಿಲೇಶ್, ಕಾಂಗ್ರೆಸ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಫೆಬ್ರವರಿ 16 ರಂದು ಯುಪಿಗೆ ಪ್ರವೇಶಿಸುವ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅಖಿಲೇಶ್ ಯಾದವ್ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಆಹ್ವಾನ ಬಂದಿದೆ. ಅಮೇಥಿ ಅಥವಾ ರಾಯ್ಬರೇಲಿಯಲ್ಲಿ ಯಾತ್ರೆಗೆ ಸೇರಲು ಯಾದವ್ ಒಪ್ಪಿಗೆ ನೀಡಿದ್ದಾರೆ ಎಂದು ಸಮಾಜವಾದಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ನ್ಯಾಯ ಯಾತ್ರೆ ಎಸ್ಪಿಯ ‘ಪಿಡಿಎ’ ಕಾರ್ಯತಂತ್ರದಲ್ಲಿ ಭಾಗಿಯಾಗಲಿದೆ ಮತ್ತು “ಸಾಮಾಜಿಕ ನ್ಯಾಯ ಮತ್ತು ಪರಸ್ಪರ ಸಾಮರಸ್ಯ” ಕ್ಕಾಗಿ ತನ್ನ ಆಂದೋಲನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ತಾನು ನಿರೀಕ್ಷಿಸಿದ್ದೇನೆ ಎಂದು ಯಾದವ್ ಹೇಳಿದ್ದಾರೆ.




Join Whatsapp