ಪಣಜಿ: ಉತ್ತರ ಗೋವಾದ ಮಾಪುಸಾ ನಗರದಲ್ಲಿ ಫಾಸ್ಟ್ ಫುಡ್ ‘ಗೋಬಿ ಮಂಚೂರಿಯನ್ ‘ ಮಾರಾಟವನ್ನು ನಿಷೇಧಿಸಿ ಸ್ಥಳೀಯ ನಗರ ಪಾಲಿಕೆ ಆದೇಶ ಹೊರಡಿಸಿದೆ.
ಸಿಂಥೆಟಿಕ್ ಬಣ್ಣಗಳು ಮತ್ತು ನೈರ್ಮಲ್ಯದ ಕಾಳಜಿಯ ಕಾರಣದಿಂದ ಗೋವಾದ ನಗರವಾದ ಮಾಪುಸಾದಲ್ಲಿ ಸ್ಟಾಲ್ ಗಳು ಮತ್ತು ಫೆಸ್ಟ್ ಗಳಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಲಾಗಿದೆ.
ನಗರದ ಯಾವುದೇ ಹೋಟೆಲ್– ಅಂಗಡಿ, ತಳ್ಳುಗಾಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಮುಂದಿನ ಆದೇಶದವರೆಗೂ ಗೋಬಿ ಮಂಚೂರಿಯನ್ ಮಾರಾಟಕ್ಕೆ ನಿಷೇಧ ಇರಲಿದೆ.