ರಾಮಮಂದಿರ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಪಾಣಕ್ಕಾಡ್ ತಂಙಲ್: ಸಿಪಿಐಎಂ ಆಕ್ರೋಶ

Prasthutha|

ತಿರುವನಂಪಪುರಂ: ಭಾರತೀಯ ಮುಸ್ಲಿಂ ಲೀಗ್ ಒಕ್ಕೂಟ (ಐಯುಎಂಎಲ್) ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ ರಾಮಮಂದಿರ ನಿರ್ಮಾಣವಾಗಿರುವುದನ್ನು ಬೆಂಬಲಿಸಿ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಿದೆ. ಈಗ ಮಸೀದಿಯೂ ನಿರ್ಮಾಣಗೊಳ್ಳಲಿದ್ದು, ಭಾರತದ ಜಾತ್ಯತೀತತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

- Advertisement -

ಕೇರಳದಲ್ಲಿ ಶಿಹಾಬ್ ತಂಙಲ್ ಅವರ ಐಯುಎಂಎಲ್ ವಿಪಕ್ಷ ಕಾಂಗ್ರೆಸ್-ಯುಡಿಎಫ್ ಮಿತ್ರ ಪಕ್ಷವಾಗಿದ್ದು, ಮುಸ್ಲಿಮ್ ಸಮುದಾಯದ ಪ್ರಬಲ ಪಕ್ಷವಾಗಿದೆ. ಜನವರಿ 24 ರಂದು ಇಲ್ಲಿಗೆ ಸಮೀಪದ ಮಂಜೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಂಙಲ್ ಈ ಹೇಳಿಕೆ ನೀಡಿದ್ದು,, ಅದರ ವಿಡಿಯೋ ವೈರಲ್ ಆಗಿದೆ.

ಈ ಹೇಳಿಕೆಗೆ ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ ಐಯುಎಂಎಲ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದೆ.

- Advertisement -

ಕಾಂಗ್ರೆಸ್ ಪಕ್ಷ ಮತ್ತು ಐಯುಎಂಎಲ್ ತಂಙಲ್ ಅವರನ್ನು ಸಮರ್ಥಿಸಿಕೊಂಡಿದ್ದು, ತಂಙಲ್ ದ್ವೇಷದ ಪ್ರಚಾರ ಮತ್ತು ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿವೆ.

ಮಂಜೇರಿಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಂಙಳ್, ರಾಮ ಮಂದಿರ ದೇಶದ ಬಹುಸಂಖ್ಯಾತ ಜನರಿಂದ ಪೂಜಿಸಲ್ಪಡುವುದಾಗಿದೆ. ಇದು ವಾಸ್ತವ ಎಂದು ಹೇಳಿದ್ದಾರೆ.

ನಾವು ರಾಮಮಂದಿರದ ವಿರುದ್ಧ ಪ್ರತಿಭಟಿಸುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶದ ಆಧಾರದ ಮೇಲೆ ಮಂದಿರವನ್ನು ನಿರ್ಮಿಸಲಾಗಿದೆ ಮತ್ತು ಬಾಬರಿ ಮಸೀದಿಯನ್ನು ನಿರ್ಮಿಸಲಾಗುವುದು. ಎರಡೂ ಈಗ ಭಾರತದ ಭಾಗವಾಗಿದೆ. ರಾಮಮಂದಿರ ಮತ್ತು ಪ್ರಸ್ತಾವಿತ ಬಾಬರಿ ಮಸೀದಿ ನಮ್ಮ ದೇಶದ ಜಾತ್ಯತೀತತೆಯನ್ನು ಬಲಪಡಿಸುವ ಎರಡು ಅತ್ಯುತ್ತಮ ಉದಾಹರಣೆಗಳಾಗಿವೆ ಎಂದು ತಂಙಲ್ ವೀಡಿಯೊದಲ್ಲಿ ಹೇಳುತ್ತಿರುವುದು ಕಂಡುಬಂದಿದೆ.



Join Whatsapp