ಕಾಂಗ್ರೆಸ್ ನಾಯಕರಿಗೆ ಅಖಂಡ ಭಾರತ ಇಷ್ಟವಿಲ್ಲ: ಈಶ್ವರಪ್ಪ

Prasthutha|

ರಾಯಚೂರು: ಕಾಂಗ್ರೆಸ್ ನಾಯಕರಿಗೆ ಭಾರತ ದೇಶ ಅಖಂಡವಾಗಿರುವುದು ಇಷ್ಟವಿಲ್ಲ. ಹಿಂದೆ ಭಾರತ– ಪಾಕಿಸ್ತಾನ ವಿಭಜಿಸಿದ ನಾಯಕರು, ಈಗ ದಕ್ಷಿಣ ಭಾರತ ಪ್ರತ್ಯೇಕದ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

- Advertisement -


ಡಿ.ಕೆ.ಸುರೇಶ ಅವರು ಪ್ರತ್ಯೇಕ ರಾಷ್ಟ್ರವಾಗಲಿ ಎಂದ ತಕ್ಷಣ ದೇಶ ಒಡೆಯೋಕೆ ಆಗಲ್ಲ. ನಮ್ಮನ್ನು ಬಿಟ್ಟು (ಬಿಜೆಪಿ ಹೊರತುಪಡಿಸಿ) ಈ ದೇಶದಲ್ಲಿ ಬೇರೆ ಯಾರೂ ಅಧಿಕಾರಕ್ಕೆ ಬರಲ್ಲ. ಈ ದೇಶ ಒಡೆಯುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ ಎಂದರು.


ಪ್ರಧಾನಿ ಮೋದಿಯವರ ವಿಶೇಷ ಬಜೆಟ್ ಇದಾಗಿದೆ. ಬಡವ, ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.



Join Whatsapp