ದಾರಿ ತಪ್ಪುತ್ತಿದ್ದಾನೆ ಎಂಬ ಕಾರಣಕ್ಕೆ ಮಗನನ್ನು ಕೊಂದ ತಂದೆ..!

Prasthutha|

ಮುಂಬೈ: ಮಗ ದಾರಿ ತಪ್ಪುತ್ತಿದ್ದಾನೆ, ಎಷ್ಟು ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ತಂದೆ ಮಗನನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

- Advertisement -

ತಂದೆ ಪಾನೀಯಕ್ಕೆ ವಿಷ ಹಾಕಿ ಮಗನನ್ನು ಹತ್ಯೆ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ವಿಜಯ್ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ.

- Advertisement -

ಜನವರಿ 13ರಂದು ಬಾಲಕನೊಬ್ಬ ಕಾಣೆಯಾಗಿದ್ದ ಎನ್ನುವ ದೂರನ್ನು ಪೊಲೀಸರು ಸ್ವೀಕರಿಸಿದ್ದರು. ಇದಾದ ಬಳಿಕ ಬಾಲಕನ ಶವವೂ ಪತ್ತೆಯಾಗಿತ್ತು. ಕುಟುಂಬದವರು ಶವವನ್ನು ತಮ್ಮ ಕಾಣೆಯಾದ ಮಗ ವಿಶಾಲ್ ಎಂದು ಗುರುತಿಸಿದ್ದಾರೆ ಮತ್ತು ನಂತರದ ಮರಣೋತ್ತರ ಪರೀಕ್ಷೆಯಲ್ಲಿ ಆತ ವಿಷ ಸೇವಿಸಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತಂದೆಯ ಹಾವ ಭಾವದಲ್ಲಿ ವ್ಯತ್ಯಾದವನ್ನು ಗುರುತಿಸಿದ ಪೊಲೀಸರು ಅವರನ್ನು ವಿಚಾರಿಸಿದ್ದಾರೆ. ಆಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

Join Whatsapp