ರಾಮ ಮಂದಿರ ಉದ್ಘಾಟನೆಗೆ ಹೋದವರಿಗೆ ಧಿಕ್ಕಾರ ಹೇಳಿದ ಪ್ರಭುಚನ್ನಬಸವ ಸ್ವಾಮೀಜಿ

Prasthutha|

ಬೆಳಗಾವಿ: ಶರಣ ತತ್ವಗಳನ್ನು ಹೇಳುವ, ಮೀಸಲಾತಿಗಾಗಿ ಹೋರಾಡುವ ಕೆಲವು ಸ್ವಾಮೀಜಿಗಳೇ ಜ.22ರಂದು ಮಂದಿರ ಉದ್ಘಾಟನೆಗೆ ಹೋಗಿದ್ದಾರೆ ಅವರಿಗೆ ನಾನು ಧಿಕ್ಕಾರ ಹೇಳುತ್ತೇನೆ ಎಂದು ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಹೇಳಿದ್ದಾರೆ.

- Advertisement -

ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ ಸ್ವಾಮೀಜಿ ಹೀಗೆ ಹೇಳಿದ್ದಾರೆ.

‘ಸನಾತನ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ; ಈ ಧರ್ಮದಲ್ಲಿ ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪು’ ಎಂದು ಸೀತಾಮಾತೆಯೇ ಹೇಳಿದ್ದಾಳೆ ಎಂದ ಸ್ವಾಮೀಜಿ, ಧರ್ಮದೊಳಗಿನ ಸೂಕ್ಷ್ಮತೆಯನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸ್ವತಂತ್ರವಾದ ಲಿಂಗಾಯತ ಧರ್ಮವನ್ನೇ ಪಾಲಿಸಬೇಕು ಎಂದಿದ್ದಾರೆ

- Advertisement -

ಕಾವಿ ಹಾಕಿಕೊಂಡವರು ಸಮಾಜ ಒಡೆಯುವ ಕೆಲಸ ಮಾಡಬಾರದು

ಆಡಿ- ಹಂದಿಗುಂದದ ಸಿದ್ಧೇಶ್ವರ ಮಠಾಧೀಶ ಶಿವಾನಂದ ಸ್ವಾಮೀಜಿ ಮಾತನಾಡಿ, ಕಾವಿ ಹಾಕಿಕೊಂಡವರು ಸಮಾಜ ಒಡೆಯುವ ಕೆಲಸ ಮಾಡಬಾರದು. ಲಿಂಗಾಯತ ಧರ್ಮ ಪಾಲನೆ ಸಾಧ್ಯವಾಗದಿದ್ದರೆ ಕಾವಿ ಬಿಚ್ಚು, ಪೀಠವನ್ನು ತ್ಯಾಗ ಮಾಡಬೇಕು’ ಎಂದು ಹೇಳಿದ್ದಾರೆ

ಕೊಂಡಿ ಮಂಚಣ್ಣ ಎಂಬಾತ ಬಸವಣ್ಣನವರಿಗೆ ನಿಂದಕನಾಗಿದ್ದ. ಈಗ ವೀರಶೈವ- ಲಿಂಗಾಯತ ಒಂದೇ ಎಂದು ಯಾರು ಹೇಳುತ್ತಾರೋ ಅವರೇ ಕೊಂಡಿ ಮಂಚಣ್ಣ ಎಂದೂ ಅವರು ತಿಳಿಸಿದ್ದಾರೆ..



Join Whatsapp