ಶಾಲಾ ಪ್ರವಾಸದಲ್ಲಿ ಘೋರ ದುರಂತ: ಬೋಟ್ ಮುಳುಗಿ 13 ಮಂದಿ ಮೃತ, ಹಲವರು ನಾಪತ್ತೆ

Prasthutha|

ವಡೋದರ: ತುಂಬು ಉತ್ಸಾಹದಿಂದ ಹಾಡುತ್ತಾ ಸಂತೋಷದಿಂದ ಹೊರಟ ಶಾಲಾ ವಿದ್ಯಾರ್ಥಿಗಳ ಪ್ರವಾಸ ದುರಂತ ಅಂತ್ಯಕಂಡಿದ್ದು, ಖಾಸಗಿ ಶಾಲೆಯ 27 ವಿದ್ಯಾರ್ಥಿಗಳಿದ್ದ ಬೋಟ್ ಮುಳುಗಿದೆ. 10 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ. ಕೆಲವು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಗುಜರಾತ್‌ನ ವಡೋದರದ ಹರ್ನಿಯಲ್ಲಿ ನಡೆದಿದೆ.

- Advertisement -

ಮೊಟ್ನಾಥ್ ಲೇಕ್‌ಗೆ ಶಾಲಾ ಪ್ರವಾಸ ಕೈಗೊಳ್ಳಲಾಗಿತ್ತು. ಈ ವೇಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮಂದಿಯನ್ನು ಬೋಟ್‌ನಲ್ಲಿ ಹತ್ತಿಸಿದ್ದಾರೆ. ಯಾವುದೇ ಮಕ್ಕಳಿಗೆ ಲೈಫ್ ಜಾಕೆಟ್ ನೀಡಿಲ್ಲ.ಬೋಟ್‌ನಲ್ಲಿ ತೆರಳುತ್ತಿದ್ದ 27 ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ನೀಡದೇ ಇರುವುದು ಸಾವಿನ ಸಂಖ್ಯೆ ಹೆಚ್ಚಿಸಿದೆ. ಬೃಹತ್ ಕೆರೆಯಲ್ಲಿ ಮೋಜಿನ ಪ್ರವಾಸ ಆರಂಭಗೊಂಡ ಕೆಲ ಹೊತ್ತಲ್ಲಿ ಬೋಟ್ ಮಗುಚಿ ಬಿದ್ದಿದೆ. ಇದುವರೆಗೆ 12 ಮೃತದೇಹ ಹೊರಕಕ್ಕೆ ತೆಗೆಯಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಸಾಗಿದೆ.

ಈಜು ಬಾರದ ಮಕ್ಕಳು ಹಾಗೂ ಶಿಕ್ಷಕರು ಮುಳುಗಿದ್ದಾರೆ. ತಕ್ಷಣವೇ ರಕ್ಷಣಾ ತಂಡದ ಈಜುಗಾರರು ನೆರವಿಗೆ ಧಾವಿಸಿದ್ದಾರೆ. 23 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆದರೆ ಈ ಪೈಕಿ 10 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನು ಇಬ್ಬರೂ ಶಿಕ್ಷಕರು ಕೂಡ ಮೃತಪಟ್ಟಿದ್ದಾರೆ. ಕೆಲ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಘಟನೆ ಕುರಿತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಆಘಾತ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಬೋಟ್ ದುರಂತದಲ್ಲಿ ಮೃತಪಟ್ಟಿರುವ ಸುದ್ದಿ ಕೇಳಿ ಆಘಾತವಾಗಿದೆ. ಸರ್ಕಾರ ಸೂಕ್ತ ನೆರವು ನೀಡಲು ಸಂಬಂಧ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತಪಟ್ಟಿ ವಿದ್ಯಾರ್ಥಿಗಳ ಕುಟುಂಬಕ್ಕ ನನ್ನ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.



Join Whatsapp