ಅಮಾನತು ಹಿಂಪಡೆಯಿರಿ: ಭಾರತ ಕುಸ್ತಿ ಫೆಡರೇಷನ್

Prasthutha|

ನವದೆಹಲಿ: ತನ್ನ ಮೇಲೆ ಹಾಕಿರುವ ಅಮಾನತು ಹಿಂಪಡೆಯಲು ಆಗ್ರಹಿಸಿ ಕ್ರೀಡಾ ಸಚಿವಾಲಯದ ಜತೆ ಮಾತುಕತೆ ನಡೆಸಲು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಂಗಳವಾರ ನಿರ್ಧರಿಸಿದ್ದು, ಅಮಾನತು ಆದೇಶ ಹಿಂಪಡೆಯಲು ಒತ್ತಡ ಹಾಕಿದೆ.ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ ಮತ್ತು ಮಾತುಕತೆ ವಿಫಲವಾದರೆ ಕಾನೂನು ಮೊರೆ ಹೋಗುವ ಬಗ್ಗೆ ತೀರ್ಮಾನಿಸಲಾಗುವುದು ಎಂದೂ ಹೇಳಿದೆ.

- Advertisement -

ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ. ನ್ಯಾಯಾಲಯಕ್ಕೆ ಹೋಗುತ್ತಿಲ್ಲ. ಸಚಿವಾಲಯದ ಸಮಯ ಕೋರಿದ್ದೇವೆ. ನಿಯೋಗವು ಸರ್ಕಾರದೊಂದಿಗೆ ಚರ್ಚೆಗೆ ಪ್ರಯತ್ನಿಸಲಿದೆ’ ಎಂದು ಸಂಜಯ್ ಸಿಂಗ್ ಸಭೆಯ ನಂತರ ಸುದ್ದಿಸಂಸ್ಥೆಗೆ ತಿಳಿಸಿದರು.

ಅಮಾನತು ತೆರವು ಮಾಡಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಬಯಸುತ್ತೇವೆ. ಡಬ್ಲ್ಯುಎಫ್‌ಐ ಅಮಾನತುಗೊಳಿಸುವ ವೇಳೆ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಕೆಲವು ಷರತ್ತುಗಳನ್ನು ವಿಧಿಸಿತ್ತು. ಸರ್ಕಾರ ಅಮಾನತು ಹೇಗೆ ತೆರವು ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆಯೂ ಸಚಿವಾಲಯಕ್ಕೆ ಪತ್ರ ಬರೆದಿದ್ದೆವು. ಆದರೆ ಉತ್ತರ ಬಂದಿಲ್ಲ. 2-3 ದಿನಗಳಲ್ಲಿ ಸಚಿವಾಲಯವನ್ನು ಸಂಪರ್ಕಿಸುತ್ತೇವೆ. ಮಾತುಕತೆಗೆ ನಿಯೋಗ ರಚಿಸಲಾಗುವುದು ಮತ್ತು ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೂ ಮುನ್ನ ಅಮಾನತು ತೆರವು ಮಾಡಬಹುದೆಂದು ಭಾವಿಸುತ್ತೇನೆ ಎಂದರು.



Join Whatsapp