ಮಂಗಳೂರು: ನಗರವನ್ನು ಡ್ರಗ್ಸ್ ಮುಕ್ತ ಮಾಡಲು ಪಣ ತೊಟ್ಟ ಪೊಲೀಸ್ ಇಲಾಖೆ, ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ಮಂಗಳೂರು ನಗರದಲ್ಲಿ ಆಯೋಜಿಸಿದೆ. ನಗರದ ಪುರಭವನದಲ್ಲಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ವಾಕ್ ರನ್ ಸೈಕ್ಲೋಥಾನ್ ಗೆ ಚಾಲನೆ ನೀಡಿದ್ದಾರೆ. ಡಿಸಿಪಿ ದಿನೇಶ್ ಕುಮಾರ್ ಮತ್ತಿತರ ಅಧಿಕಾರಿ ಮತ್ತು ಶಿಕ್ಷಕ ವರ್ಗ ಸಾಥ್ ನೀಡಿದ್ದಾರೆ.
ಎಂ ಜಿ ರಸ್ತೆಯ ಟಿಎಂಎ ಪೈವರೆಗೂ ವಾಕಥಾನ್ ನಡೆದರೆ, ಸೈಕ್ಲೋಥಾನ್ ಟೌನ್‌ಹಾಲ್‌ನಿಂದ ಹೊರಟು-ಕ್ಲಾಕ್‌ಟವರ್-ಹಂಪನಕಟ್ಟೆ-ಎಲ್‌ಹೆಚ್‌ಹೆಚ್-ಮಿಲಾಗ್ರೀಸ್-ಫಳ್ನೀರ್-ಕಂಕನಾಡಿ-ಬೆಂದೂರ್‌ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಷನ್ ಹಾಲ್ ವರೆಗೆ 5 ಕಿ.ಮೀ ವರೆಗೆ ಸಾಗಿದೆ. ನಗರದ 24 ಕಾಲೇಜ್‌ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ 2 ಸಾವಿರಕ್ಕೂ ಅಧಿಕ ಜನ ಈ ಮಾದಕ ವ್ಯಸನ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿದ್ದರು.