ಅಕಸ್ಮಾತ್ ಏನಾದರೂ ಆದರೆ ಕಾಂಗ್ರೆಸ್ ಸರ್ಕಾರವೇ ಕಾರಣ: ಬೊಮ್ಮಾಯಿ

Prasthutha|

ಹುಬ್ಬಳ್ಳಿ : ರಾಮಮಂದಿರ ಆಗಬಾರದು ಅನ್ನೋದು ಕಾಂಗ್ರೆಸ್ಸಿನ ಆಸೆಯಾಗಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿ ಅನುಭವಿಸಿದ ಬಂದು ವಾತಾವರಣ ಇದೆ ಸಿಎಂ ಮಂತ್ರಿಗಳ ಭಾಷೆ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ. ರಾಮಮಂದಿರ ವಿಚಾರದಲ್ಲಿ ರಾಜ್ಯದಲ್ಲಿ ಅಕಸ್ಮಾತ್ ಏನಾದರೂ ಆದರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರ ಹಾಕಿದ್ದಾರೆ.

- Advertisement -

ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿ ರಾಜ್ಯದಲ್ಲಿ ಕೋಮುಗಳಭೆ ಸೃಷ್ಟಿಸಲು ತತ್ವ ಹೊರಡಿಸಿದೆ ಎಂದು ಸಾಕ್ಷಿ ಸಮೇತ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದಕ್ಕೆ ಬೊಮ್ಮಾಯಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ಕೇಸ್ ಹಾಕುತ್ತಿದ್ದಾರೆ. ಕರ್ನಾಟಕದಲ್ಲಿ ಭಯ ಹುಟ್ಟಿಸುವ ಪ್ರಯತ್ನ ಆಗುತ್ತಿದೆ. ಶ್ರೀಕಾಂತ್ ವಿರುದ್ಧ ಯಾವ ಕೇಸ್ ಇಲ್ಲ ಆದರೂ ಜೈಲಿಗೆ ಹಾಕಿದ್ದರು. ಶ್ರೀಕಾಂತ್ ಬಂಧಿಸಿದ ಇನ್ಸ್ಪೆಕ್ಟರ್ ಸಚಿವರು ಕ್ಷಮೆ ಕೇಳಲಿಲ್ಲ.ಏಳು ತಿಂಗಳಲ್ಲೇ ಅಧಿಕಾರದ ಮದ ಏರಿದೆ. ನಾಳೆ ಚಿಂತನ ಮಂಥನ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.

- Advertisement -

ರಾಮಮಂದಿರ ಆಗಬಾರದು ಅನ್ನೋದು ಕಾಂಗ್ರೆಸ್‌ನ ಆಸೆಯಾಗಿತ್ತು ಕಾಂಗ್ರೆಸ್ ಎಂಎಲ್ಸಿ ಹರಿಪ್ರಸಾದ್ ಗೋದ್ರಾ ಬಗ್ಗೆ ಮಾತನಾಡುತ್ತಾರೆ. ಎಂಎಲ್ಸಿ ಹರಿಪ್ರಸಾದ್ ಗೆ ಮಾಹಿತಿ ಇದ್ದರೆ ಯಾಕೆ ಕೊಡಲಿಲ್ಲ? ಅಕಸ್ಮಾತ್ ಏನಾದರೂ ಆದರೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.



Join Whatsapp