ಬೆಂಗಳೂರು: ನೈಸ್ ಯೋಜನೆಯಿಂದ ತುಂಬಾ ದಿನಗಳಿಂದ ಬಡವರಿಗೆ ಅನ್ಯಾಯ ವಾಗಿದೆ. ಅದನ್ನು ಸರಿಪಡಿಸಿ ಬಡವರ ಜಮೀನು ಉಳಿಸಿಕೊಟ್ಟರೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಭಾರಿಯಾಗಿರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಹೇಳಿದರು.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಅಕ್ರಮದ ವಿರುದ್ದ ನಮ್ಮ ಪಕ್ಷ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಸುದೀರ್ಘವಾಗಿ ಚರ್ಚೆಯಾಗಿದೆ ಎಂದರು. ಜಯಚಂದ್ರ ಅವರ ಅದ್ಯಕ್ಷತೆಯಲ್ಲಿ ಒಂದು ಕಮಿಟಿ ನೇಮಕಮಾಡಿ, ಪ್ರಾಜೆಕ್ಟ್ ಅನ್ನು ಸರ್ಕಾರ ತೆಗೆದುಕೊಳ್ಳಬೇಕು. ಅಕ್ರಮಗಳನ್ನು ಸರಿಪಡಿಸಬೇಕು. ಸರ್ಕಾರ ಈವರೆಗೆ ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ, ವಿಳಂಬವಾಗಿದೆ ಎಂದು ದೇವೇಗೌಡ ಹೇಳಿದರು.