ಪ್ರಧಾನಿ ಮೋದಿ ಉದ್ಯೋಗ ಕೊಡಿ | #PMModi_RozgarDo ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್

Prasthutha|

ನವದೆಹಲಿ : ಕೋಟ್ಯಂತರ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಜನ ಈಗಾಗಲೇ ಪ್ರಶ್ನಿಸಲಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಜನರು ಪ್ರಶ್ನೆಗಳನ್ನೆತ್ತುತ್ತಿದ್ದು, ಇಂದು #PMModi_RozgarDo (#ಪ್ರಧಾನಿಮೋದಿಉದ್ಯೋಗ_ಕೊಡಿ) ಎಂಬ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿದೆ. ಸುಮಾರು 16 ಲಕ್ಷಕ್ಕೂ ಹೆಚ್ಚು ಜನರು ಈ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಟ್ರೆಂಡಿಂಗ್ ಗೆ ಕಾರಣವಾಗಿದ್ದಾರೆ.

- Advertisement -

ದೇಶ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಯುವಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಪ್ರಧಾನಿಯವರು ಯುವಕರಿಗೆ ಉದ್ಯೋಗ ನೀಡಬೇಕು ಎಂಬ ಒಕ್ಕೊರಲ ಬೇಡಿಕೆ ಈ ಹ್ಯಾಶ್ ಟ್ಯಾಗ್ ಮೂಲಕ ಕೇಳಿಬಂದಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಮಾಡಿದ್ದ ‘ಮನ್ ಕೀ ಬಾತ್’ ಭಾಷಣ ಕುರಿತ ವೀಡಿಯೊಗೆ ಯೂಟ್ಯೂಬ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಡಿಸ್ ಲೈಕ್ ನೀಡುವ ಮೂಲಕ ಸುಳ್ಳು ಭರವಸೆಗಳ ಮೂಲಕ ಗಾಳಿ ಗೋಪುರ ಕಟ್ಟುವ ಬಿಜೆಪಿಗೆ ಸಣ್ಣ ಬಿಸಿ ಮುಟ್ಟಿಸಿದ್ದರು. ಇದರಿಂದ ಪ್ರಧಾನಿ ಮೋದಿಯವರು ಭಾರೀ ಮುಜುಗರವನ್ನು ಎದುರಿಸಬೇಕಾಗಿ ಬಂದಿತ್ತು. ಇದೀಗ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮೂಲಕ, ಯುವಕರು ಪ್ರಧಾನಿ ಮೋದಿಯವರ ಸುಳ್ಳು ಭರವಸೆಗಳನ್ನು ನಿಧಾನವಾಗಿ ಅರ್ಥೈಸಲು ಆರಂಭಿಸಿರುವ ಸುಳಿವು ಸಿಕ್ಕಂತಾಗಿದೆ.

- Advertisement -

ಈ ಕುರಿತ ಕೆಲವು ಆಯ್ದ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.

Join Whatsapp