ಜಾತಿಗಣತಿ ವರದಿ ಜಾರಿಯಾಗಲೇಬಾರದು ಎನ್ನುವುದು ಸರಿಯಲ್ಲ: ಜಿ. ಪರಮೇಶ್ವರ್

Prasthutha|

ಬೆಂಗಳೂರು: ಜಾತಿಗಣತಿ ವರದಿ ಜಾರಿಯೇ ಆಗಕೂಡದು ಎನ್ನುವುದು ಸರಿಯಲ್ಲ. ಜಾತಿ ಗಣತಿಯ ವರದಿಯ ಪರಿಣಾಮದ ಬಗ್ಗೆ ಸಲಹೆಗಳನ್ನು ನೀಡಬಹುದು. ಆದರೆ, ಜಾರಿಯಾಗಲೇಬಾರದು ಎಂದು ಹೇಳಬಾರದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

- Advertisement -

ಜಾತಿಗಣತಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶ ನಡೆಯುತ್ತಿದ್ದರೆ, ಅದಕ್ಕೆ ಟಾಂಗ್ ಕೊಡುವಂತೆ ಲಿಂಗಾಯತ ಸಮಾವೇಶ ಆಗುತ್ತದೆ ಅಲ್ವಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಸರ್ಕಾರ ತೀರ್ಮಾನ ಮಾಡಿ ಜಾತಿಗಣತಿಗೆ ಹಣ ಖರ್ಚು ಮಾಡಿದೆ. ವರದಿಯ ಇಂಪ್ಯಾಕ್ಟ್ ಬಗ್ಗೆ, ಬೇರೆಬೇರೆ ತೀರ್ಮಾನಗಳ ಬಗ್ಗೆ ಪ್ರತಿಭಟಿಸಿ, ಸಲಹೆಗಳನ್ನು ನೀಡಲಿ. ಇದಕ್ಕೆ ತಕರಾರು ಏನು ಇಲ್ಲ. ಆದರೆ ವರದಿ ಜಾರಿಯಾಗಬಾರದು ಎನ್ನುವುದು ಸರಿಯಲ್ಲ ಎಂದರು.



Join Whatsapp