2 ಡಝನ್‌ ವಾಹನದ ಬೆಂಗಾವಲಿನೊಂದಿಗೆ ಬಂದ ಪಂಜಾಬ್‌ ಸಿಎಂ ಪತ್ನಿ

Prasthutha|

ನವದೆಹಲಿ: ಪಂಜಾಬ್ ಸಿಎಂ ಭಗವಂತ್ ಮಾನ್ ಅವರ 2ನೇ ಪತ್ನಿ ಗುರುಪ್ರೀತ್ ಕೌರ್ ಬೆಂಗಾವಲು ಪಡೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ನೋಡಿದ ಜನರ ಹುಬ್ಬೇರಿವೆ. ಗುರ್‌ಪ್ರೀತ್ ಕೌರ್‌ಗೆ ಸೇರಿದ ಬೆಂಗಾವಲು ಪಡೆ ಸುಮಾರು ಎರಡು ಡಜನ್ ವಾಹನಗಳನ್ನು ಹೊಂದಿದೆ ಎಂದು ವೀಡಿಯೊದಲ್ಲಿ ತೋರಿಸಲಾಗಿದೆ. ಆಮ್‌ ಆದ್ಮಿ ಪಾರ್ಟಿ ಅಂದರೆ, ಬಡ ಜನರ ಪಕ್ಷ ಎಂದು ಹೇಳಿಕೊಂಡು ಅಧಿಕಾರಕ್ಕೇರಿರುವ ಪಕ್ಷದ ಸಿಎಂನ ಪತ್ನಿ ಎರಡು ಡಜನ್‌ ವಾಹನಗಳ ಬೆಂಗಾವಲಿನೊಂದಿಗೆ ಪ್ರಯಾಣ ಮಾಡುತ್ತಾಳೆ. ಇದೇನಾ ಕಾಮನ್‌ ಮ್ಯಾನ್‌ ಗವರ್ನಮೆಂಟ್‌ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಶ್ರೀಸಾಮಾನ್ಯನ ಸರ್ಕಾರ ಅಂದ್ರೆ ಇದೇನಾ ಎಂದು ಜನ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.

- Advertisement -

ಮಾಣಿಕ್ ಗೋಯಲ್ ಎಂಬ ಬಳಕೆದಾರರು Xನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ವೀಡಿಯೊವನ್ನು ನೋಡಿದ ನಂತರ, ಬೆಂಗಾವಲು ಪಡೆ ಪ್ರಧಾನಿ, ಮುಖ್ಯಮಂತ್ರಿ ಅಥವಾ ಯಾವುದೇ ಕೇಂದ್ರ ಸಚಿವರಿಗೆ ಸೇರಿದೆ ಎಂದು ನೀವು ಭಾವಿಸಿರಬಹುದು. ಆದರೆ, ನಿಮ್ಮ ಯೋಚನೆ ತಪ್ಪು, ಈ ಬೆಂಗಾವಲು ಪಡೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಗುರುಪ್ರೀತ್ ಕೌರ್ ಅವರದ್ದು. ಗುರುಪ್ರೀತ್ ಕೌರ್ ಅವರು ಚುನಾಯಿತ ಸಾರ್ವಜನಿಕ ಪ್ರತಿನಿಧಿಯೂ ಅಲ್ಲ ಅಥವಾ ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿಲ್ಲ ಎಂದು ಅವರು ಬರೆದಿದ್ದಾರೆ.

ಗುರ್ ಪ್ರೀತ್ ಕೌರ್ 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸರ್ಕಾರಿ ಬುಲೆಟ್ ಪ್ರೂಫ್ ಲ್ಯಾಂಡ್ ಕ್ರೂಸರ್ ಕಾರನ್ನು ಬಳಸುತ್ತಾರೆ. ಅವರ ಭದ್ರತೆಗೆ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿಗಳ ತಾಯಿ ಮತ್ತು ಸಹೋದರಿ ಕೂಡ ದೊಡ್ಡ ಬೆಂಗಾವಲು ಪಡೆ ಮತ್ತು ಭದ್ರತೆಯನ್ನು ಬಳಸುತ್ತಾರೆ. ಚುನಾವಣೆ ಗೆಲ್ಲುವ ಮುನ್ನ ಭಗವಂತ್ ಮಾನ್ ನಾಯಕರಿಗೆ ಭಾರೀ ಭದ್ರತೆ ನೀಡಿರುವುದನ್ನು ಟೀಕಿಸುತ್ತಿದ್ದರು. ಈಗ ಅವರ ಕುಟುಂಬದ ಸದಸ್ಯರು ಸರ್ಕಾರದಿಂದ ಹೆಚ್ಚಿನ ರಕ್ಷಣೆ ತೆಗೆದುಕೊಳ್ಳುತ್ತಾರೆ. ಇದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಸರ್ಕಾರದ ವಾಸ್ತವ ಎಂದು ಟೀಕಿಸಿದ್ದಾರೆ.

- Advertisement -



Join Whatsapp