ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಇಂದು ಖ್ಯಾತ ಬಾಲಿವುಡ್ ನಟ ಮಿಥುನ್ ಚಕ್ರವರ್ತಿಯನ್ನು ಅವರ ಸ್ವಗೃಹದಲ್ಲಿ ಭೇಟಿಯಾದರು. ಮುಂಬೈಯ ಮಿಥುನ್ ಮನೆಯಲ್ಲಿ ಉಪಹಾರವನ್ನು ಸೇವಿಸಿದ ನಂತರ ನಟ ಮಿಥುನ್ ಚಕ್ರವರ್ತಿ, “ನಾನು ಅವರೊಂದಿಗೆ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದ್ದೇನೆ. ಅವರು ಮುಂಬೈಗೆ ಭೇಟಿ ನೀಡಿದಾಗ ನನ್ನ ಮನೆಗೆ ಬರುತ್ತಾರೆ ಎಂಬ ಯೋಜನೆ ಇತ್ತು. ಈ ಭೇಟಿಯಲ್ಲಿ ರಾಜಕೀಯ ಉದ್ದೇಶ ಏನೂ ಇಲ್ಲ” ಎಂದು ತಿಳಿಸಿದರು.
ಮಿಥುನ್ ಚಕ್ರವರ್ತಿ ಈ ಹಿಂದೆ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದರು. ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳವನ್ನು ಗೆಲ್ಲುವ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ. ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆಗಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರ ಈ ಭೇಟಿ ಹಲವಾರು ರಾಜಕೀಯ ಸಾಧ್ಯತೆಗಳನ್ನು ಶಂಕಿಸಿಲಾಗಿದೆ.
ಆದರೆ ಈ ಭೇಟಿ ಕೇವಲ ಉಪಹಾರಕ್ಕಾಗಿ, ರಾಜಕೀಯಕ್ಕಾಗಿ ಅಲ್ಲ ಎಂದು ನಟ ಮಿಥುನ್ ಚಕ್ರವರ್ತಿ ಸ್ಪಷ್ಟಪಡಿಸಿದರು.