ಉತ್ತರಕಾಶಿ: ನಿರ್ಮಾಣ ಹಂತದ ಸುರಂಗ ಕುಸಿದು ಒಳಗೆ 17 ದಿನಗಳಿಂದ ಸಿಕ್ಕಿಬಿದ್ದು ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಒಂದು ದಿನದ ನಂತರ ಭಾರತೀಯ ವಾಯುಪಡೆಯ ಚಿನೂಕ್‌ನಲ್ಲಿ ರಿಷಿಕೇಶದಲ್ಲಿರುವ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಕರೆದೊಯ್ಯಲಾಗಿದೆ.
ಕಾರ್ಮಿಕರಿಗೆ ಯಾರಿಗೂ ದೈಹಿಕ ಗಾಯ ಗಾಯಗಳಿಲ್ಲದಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರಧಾನ ಆಸ್ಪತ್ರೆಗೆ ಕರೆದೊಯ್ದರೆ ಪರೀಕ್ಷೆಗಳನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 12 ರಿಂದ ಸಿಲ್ಕ್ಯಾರಾ-ದಿಂಡಲ್‌ಗಾಂವ್ ಸುರಂಗದಲ್ಲಿ 41 ಕಾರ್ಮಿಕರು ಸಿಕ್ಕಿಬಿದ್ದ ನಂತರ ಇಡೀ ದೇಶವೇ ಅವರಿಗಾಗಿ ಮರುಗುತ್ತಿತ್ತು. ವಿಶೇಷ ರಕ್ಷಣಾ ಕಾರ್ಯ ನಡೆಸಲಾಗಿತ್ತು. 17 ದಿನಗಳ ಸುರಂಗವಾಸದಿಂದ ಮಂಗಳವಾರ ಸಂಜೆ ಸುರಕ್ಷಿತವಾಗಿ ಅವರನ್ನು ಹೊರಗೆ ಕರೆತರಲಾಗಿತ್ತು. ಕೂಡಲೇ ಚಿನ್ಯಾಲಿಸೌರ್‌ನ ತಾತ್ಕಾಲಿಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಮಾತನಾಡಿ ತಲಾ 1 ಲಕ್ಷ ರೂ. ನೆರವು ನೀಡಿದ್ದರು.