ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಪ್ರಾಣ ಕಾಪಾಡಿದ ಕ್ರಿಕೆಟರ್ ಶಮಿ

Prasthutha|

ಡೆಹ್ರಾಡೂನ್:‌ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಓರ್ವ ನಾಗರಿಕನ ಪ್ರಾಣ ಉಳಿಸಲು‌ ಕಾರಣರಾಗಿದ್ದಾರೆ. ವಿಶ್ವ ಕಪ್ ಮುಗಿದ ಬಳಿಕ ರಿಲ್ಯಾಕ್ಸ್ ಮೂಡ್ ಗೆ ತೆರಳಿರುವ ಶಮಿ ಫ್ಯಾಮಿಲಿ ಜೊತೆ ನೈನಿತಾಲ್ ನಲ್ಲಿ ದಿನ ಕಳೆಯಲು ತೆರಳಿದ್ದಾರೆ. ಶಮಿ ಮತ್ತು ಕುಟುಂಬ ಪ್ರಯಾಣಿಸತ್ತಿದ್ದ ಕಾರಿನ ಮುಂಭಾಗದಲ್ಲಿ ಒಂದು ಕಾರು ಅಪಘಾತವಾಗಿ ಬಿದ್ದಿದ್ದನ್ನು ನೋಡಿದ್ದಾರೆ. ಕಾರಿನೊಳಗಡೆ ಸಿಲುಕಿ ವ್ಯಕ್ತಿಯೋರ್ವರು ನರಳುತ್ತಿದ್ದರು. ಕೂಡಲೇ ಸಹಾಯಕ್ಕೆ ಧಾವಿಸಿದ ಶಮಿ ಕಾರಿನಲ್ಲಿದ್ದ ವ್ಯಕ್ತಿಯನ್ನು ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದು ಆ ವ್ಯಕ್ತಿಯ ಪ್ರಾಣ ಉಳಿಸಿದ ಮಹತ್ತರ ಕೆಲಸವಾಗಿತ್ತು.

- Advertisement -

ಮಧ್ಯರಾತ್ರಿ ಶಮಿ ಉತ್ತರಾಖಂಡ್‌ನ ನೈನಿತಾಲ್‌ಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಬೆಟ್ಟದ ಕೆಳಗೆ ಧುಮುಕಿ ಅಪಘಾತವಾಗಿತ್ತು.

ಘಟನೆಯ ವಿಡಿಯೋವನ್ನು ಶಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕಾರಿನಲ್ಲಿದ್ದ ವ್ಯಕ್ತಿ ತುಂಬಾ ಅದೃಷ್ಟಶಾಲಿ. ದೇವರು ಆತನಿಗೆ ಎರಡನೇ ಜೀವನವನ್ನು ನೀಡಿದ್ದಾರೆ ಎಂದು ಶಮಿ‌ಬರೆದುಕೊಂಡಿದ್ದಾರೆ.

- Advertisement -

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಮಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.




Join Whatsapp