ಸುರಂಗದೊಳಗೆ ಸಿಕ್ಕಿಕೊಂಡ ಕಾರ್ಮಿಕರಿಗೆ ಇನ್ನೂ ಸಿಗದ ಮುಕ್ತಿ

Prasthutha|

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರಿಗೆ ಇನ್ನೂ ಮುಕ್ತಿ ಸಿಗಲಿಲ್ಲ. ಕುಟುಂಬಸ್ಥರು ಬಹುತೇಕ ಭರವಸೆ ಕಳಕೊಂಡಿದ್ದಾರೆ. ನತದೃಷ್ಟ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಏಳನೇ ದಿನಕ್ಕೆ ಕಾಲಿಟ್ಟಿದೆ.

- Advertisement -

ಕುಸಿದ ಸುರಂಗದಲ್ಲಿ 60 ಮೀಟರ್‌ವರೆಗೆ ಕೊರೆದರಷ್ಟೇ ಕಾರ್ಮಿಕರನ್ನು ರಕ್ಷಿಸಬಹುದಾಗಿದ್ದು, ನಿನ್ನೆಗೆ 24 ಮೀಟರ್‌ಗಳಷ್ಟು ಕೊರೆಯುವಲ್ಲಿ ಮಾತ್ರ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಇಂದಿನ ಮಾಹಿತಿ ದೊರಕಿಲ್ಲ.

ಸಿಕ್ಕಿಬಿದ್ದ ಎಲ್ಲಾ ಕಾರ್ಮಿಕರು ಇಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಪ್​ಗಳ ಮೂಲಕ ಆಮ್ಲಜನಕ, ಔಷಧಿ, ಆಹಾರ ಮತ್ತು ನೀರಿನಂತಹ ಅಗತ್ಯ ಸರಬರಾಜನ್ನು ಮಾಡಲಾಗುತ್ತಿದೆ. ಮಾನಸಿಕ ತಜ್ಞರು ಸಹ ಕಾರ್ಮಿಕರೊಂದಿಗೆ ಮಾತನಾಡುತ್ತಿದ್ದಾರೆ ಎಂದು ಎನ್​ಎಚ್​ಐಡಿಸಿಎಲ್ ನ ನಿರ್ದೇಶಕ ಅಂಶು ಮನೀಶ್ ಖಲ್ಖೋ ಹೇಳಿದ್ದಾರೆ.



Join Whatsapp