ಕ್ರಿಕೆಟ್ ಜೆರ್ಸಿ, ಮೆಟ್ರೋ ನಿಲ್ದಾಣಗಳಿಗೆ ಕೇಸರಿ ಬಣ್ಣ: ಮಮತಾ ಬ್ಯಾನರ್ಜಿ ಆಕ್ರೋಶ

Prasthutha|

ಕೋಲ್ಕತ್ತಾ: ಭಾರತೀಯ ಕ್ರಿಕೆಟ್​ ತಂಡದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಧರಿಸುವ ಜೆರ್ಸಿಗೆ ಕೇಸರಿ ಬಣ್ಣವನ್ನು ನೀಡುವ ಮೂಲಕ ಬಿಜೆಪಿ ಪಕ್ಷದ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಗಿದ್ದಾರೆ. ಇದಲ್ಲದೆ, ಮೆಟ್ರೋ ನಿಲ್ದಾಣಗಳಿಗೂ ಕೂಡ ಕೇಸರಿ ಬಣ್ಣವನ್ನು ಬಳಿಯುತ್ತಿದೆ ಎಂದು ಮಮತಾ ಅವರು ಹೇಳಿದ್ದಾರೆ.

- Advertisement -

ಸೆಂಟ್ರಲ್ ಕೋಲ್ಕತ್ತಾದ ಪೋಸ್ಟಾ ಬಜಾರ್‌ನಲ್ಲಿ ನಡೆದ ಜಗಧಾತ್ರಿ ಪೂಜೆಯ ಉದ್ಘಾಟನಾ ಸಮಾರಂಭದಲ್ಲಿ ಮಮತಾ ಮಾತನಾಡಿದರು. ಆಡಳಿತ ಪಕ್ಷ ಬಿಜೆಪಿ ಉದ್ದೇಶಪೂರ್ವಕ ‘ಕೇಸರಿಕರಣ’ವನ್ನು ಮಾಡುತ್ತಿದೆ. ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದ ಸಿಎಂ, ನಮ್ಮ ಭಾರತೀಯ ಆಟಗಾರರ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಅವರು ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುತ್ತಾರೆ ಎಂಬುದನ್ನು ಬಲವಾಗಿ ನಂಬಿದ್ದೇನೆ ಆದರೆ ಅಲ್ಲಿಯೂ ಕೇಸರಿ ತಂದಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಈ ದೇಶವು ರಾಷ್ಟ್ರದ ಜನತೆಗೆ ಸೇರಿದೆಯೇ ಹೊರತು, ಕೇವಲ ಒಂದು ಪಕ್ಷಕಲ್ಲ ಎಂದರು.

ಮಮತಾ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.