ತಮಿಳುನಾಡು, ಪುಚುಚೇರಿಯಲ್ಲಿ ಭಾರೀ ಮಳೆ

Prasthutha|

ಚೆನ್ನೈ- ತಮಿಳುನಾಡಿನಾದ್ಯಂತ ಭಾರೀ ಮಳೆಯಾಗಿದ್ದು, ಇಂದು ಚೆನ್ನೈನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಪಕ್ಕದ ತಿರುವಳ್ಳೂರು ಜಿಲ್ಲೆ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಶಾಲೆಗಳು ಹಾಗೂ ಸಂಸ್ಥೆಗಳು ಮಳೆ ರಜೆ ಘೋಷಿಸಿತ್ತು. ಅದರಂತೆಯೇ ಈ ಎಲ್ಲ ಪ್ರದೇಶಗಳಲ್ಲಿ ಭಾರೀ ಮಳೆ ದಾಕಲಾಗಿದೆ.
ಕಡಲೂರು, ಮೈಲಾಡುತುರೈ, ನಾಗಪಟ್ಟಣಂ, ತಿರುವರೂರ್, ತಂಜಾವೂರು ಮತ್ತು ವಿಲ್ಲುಪುರಂ ಸೇರಿದಂತೆ ಆರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

- Advertisement -

ಕಳೆದ 24 ಗಂಟೆಗಳಲ್ಲಿ ನಾಗಪಟ್ಟಣಂ ನ ವೆಲಂಕಣಿಯಲ್ಲಿ 17 ಸೆಂ.ಮೀ ಮಳೆಯಾಗಿದ್ದು, ಕಡಲೂರು, ಪುದುಚೇರಿ, ಚೆಂಗಲ್ಪಟ್ಟು ಮತ್ತು ಚೆನ್ನೈನಲ್ಲಿ ಸಹ ಗಮನಾರ್ಹ ಮಳೆಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪ್ರದೇಶವು ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿತ್ತು.



Join Whatsapp