ಪಾಕಿಸ್ತಾನ: ಇಮ್ರಾನ್ ಖಾನ್ ಪಕ್ಷದ 60ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ

Prasthutha|

ಕಳೆದ ಮೇ ತಿಂಗಳಿಂದ 10,000 ಕಾರ್ಯಕರ್ತರು ಜೈಲುಪಾಲು!

- Advertisement -

ಲಾಹೋರ್‌: ಪಾಕಿಸ್ತಾನದ ನಿಕಟ ಪೂರ್ವ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಪಾಕಿಸ್ತಾನಿ ಮಿಲಿಟರಿ ಮಡುವಿನ ಸಂಘರ್ಷದ ಪರಿಣಾಮವಾಗಿ  ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್‌  ಪಕ್ಷದ 60ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಇಮ್ರಾನ್‌ ಖಾನ್‌ ಬಂಧನ ವೇಳೆ ಸೇನೆ ಹಾಗೂ ಪಿಟಿಐ ಕಾರ್ಯಕರ್ತರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ. ಸೇನಾ ಯೋಧರ ಮೇಲೆ ದಾಳಿ ಹಾಗೂ ಸೇನೆಯ ನೆಲೆಗಳನ್ನು ನಾಶಪಡಿಸಿದ ಆರೋಪದ ಮೇಲೆ ಇಮ್ರಾನ್ ಖಾನ್ ಪಕ್ಷದ ಕಾರ್ಯಕರ್ತರು ಪೊಲೀಸರ ಸೆರೆಯಾಗಿದ್ದಾರೆ. ಬಂಧಿತರೆಲ್ಲ ಪಂಜಾಬ್‌ ಪ್ರಾಂತ್ಯದವರು ಎಂದು ಪೊಲೀಸರು ಹೇಳಿದ್ದಾರೆ.

- Advertisement -

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ನಂತರ ನಮ್ಮ ನಾಯಕರು ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸ್ ಕ್ರಮವನ್ನು ತೀವ್ರಗೊಳಿಸಲಾಗಿದ್ದು, ಕಳೆದ ಮೇ ತಿಂಗಳಿಂದ ಇಲ್ಲಿಯವರೆಗೂ ಪಿಟಿಐ ಪಕ್ಷದ ಮುಖಂಡರು ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಜೈಲಿನಲ್ಲಿ ಇಡಲಾಗಿದೆ ಎಂದು ಇಮ್ರಾನ್ ಖಾನ್ ನೇತೃತ್ವದ  ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.



Join Whatsapp