ಛತ್ತೀಸ್ ಗಢದಲ್ಲಿ ನಕ್ಸಲರ ಗುಂಡಿಗೆ ಬಿಜೆಪಿ ನಾಯಕ ರತನ್ ದುಬೆ ಬಲಿ

Prasthutha|

ಛತ್ತೀಸ್ ಗಢ: ರಾಜ್ಯದಲ್ಲಿ ಎಲ್ಲಾ ನಿರ್ಬಂಧಗಳ ಹೊರತಾಗಿಯೂ ಮಾವೋವಾದಿಗಳು ಭದ್ರತೆ ಮುರಿದು ಬಿಜೆಪಿ ನಾಯಕ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ರತನ್ ದುಬೆ ಅವರನ್ನು ಕೋಸಲ್ನಾರ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸ್ಥಳೀಯ ಐಜಿ ಸುಂದರ್ರಾಜ್ ಪಿ. ದಾಳಿಯನ್ನು ದೃಢಪಡಿಸಿದ್ದಾರೆ.

- Advertisement -

ನಾರಾಯಣಪುರದಲ್ಲಿ ರತನ್ ದುಬೆ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲು ಕೌಶಲ್ನಾರ್ ಗ್ರಾಮಕ್ಕೆ ತೆರಳಿದ್ದಾಗ ಈ ದಾಳಿ ನಡೆದಿದೆ. ಗಾಯಗೊಂಡಿದ್ದ ದುಬೆ ಕೆಲ ಹೊತ್ತಲ್ಲಿ ಕೊನೆಯುಸಿರೆಳೆದಿದ್ದಾರೆ.




Join Whatsapp