ಕೊಚ್ಚಿ: ಅಕ್ಟೋಬರ್ 29 ರಂದು ಬಾಲಕಿ ಸೇರಿ ಮೂವರ ಸಾವು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಳಮಶ್ಶೇರಿ ಬಾಂಬ್ ಸ್ಫೋಟದ ಆರೋಪಿ ಡೊಮಿನಿಕ್ ಮಾರ್ಟಿನ್ ಕಾನೂನು ನೆರವು ತಿರಸ್ಕರಿಸಿದ್ದಾನೆ. ನ್ಯಾಯಾಲಯದಲ್ಲಿ ತನ್ನ ಪರ ವಾದಿಸಲು ವಕೀಲರು ಬೇಡ, ತಾನೇ ವಾದಿಸುತ್ತೇನೆ ಎಂದು ತಿಳಿಸಿದ್ದಾನೆ.
ನಿನ್ನೆ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಸೆಷನ್ಸ್ ಕೋರ್ಟಿನ ನ್ಯಾಯಾಧೀಶ ಹನಿ ಎಂ ವರ್ಗೀಸ್ ಹಲವಾರು ಬಾರಿ ಮನವಿ ಮಾಡಿದ ಹೊರತಾಗಿಯೂ, ವಕೀಲರ ನೆರವನ್ನು ನಿರಾಕರಿಸಿದ ಮಾರ್ಟಿನ್, ತನ್ನನ್ನು ಸ್ವತಃ ನಾನೇ ಪ್ರತಿನಿಧಿಸುವುದಾಗಿ ಹೇಳಿಕೆ ನೀಡಿದ್ದಾನೆ.
ಆರೋಪಿಯು ಕಾನೂನು ನೆರವಿಗೆ ಒಪ್ಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.