ಸಾವಿರಾರು ಮಂದಿ ಸಾವನ್ನಪ್ಪುವ ಯುದ್ಧದಲ್ಲಿ ಯಾರೂ ವಿಜೇತರಾಗಿರುವುದಿಲ್ಲ: ವಿಶ್ವಸಂಸ್ಥೆ

Prasthutha|

ವಿಶ್ವಸಂಸ್ಥೆ: ಇಸ್ರೇಲ್ – ಪ್ಯಾಲೆಸ್ತೀನ್ ನಡುವಿನ ಸಂಘರ್ಷದಲ್ಲಿ ಸಾವಿರಾರು ಮಕ್ಕಳು ಸಾವನ್ನಪ್ಪಿದ್ದಾರೆ. ಹೀಗೆ ಮಾನವ ಬಲಿ ಬಿಟ್ರೆ ಯಾರೂ ವಿಜೇತರಾಗಿರುವುದಿಲ್ಲ ಎಂದು ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳ ಸಮಿತಿ ಹೇಳಿದೆ.

- Advertisement -

ಗಾಝಾ ಪಟ್ಟಿಯಲ್ಲಿ ತೀವ್ರವಾದ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಜಾಗತಿಕ ಮಟ್ಟದ ಸಮಿತಿ ತೀವ್ರವಾಗಿ ಖಂಡಿಸಿದೆ. ಮಕ್ಕಳ ಹಕ್ಕುಗಳ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ವಿವಿಧ ದೇಶಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯು ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ “ಮಕ್ಕಳು ಎದುರಿಸುತ್ತಿರುವ ಸಂಕಟದ ಬಗ್ಗೆ ತನ್ನ ಆಕ್ರೋಶವನ್ನು” ವ್ಯಕ್ತಪಡಿಸಿದೆ.

ಗಾಝಾ ಸ್ಟ್ರಿಪ್ನಲ್ಲಿ ಮಕ್ಕಳ ವಿರುದ್ಧದ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳು ಪ್ರತಿ ನಿಮಿಷಕ್ಕೆ ಹೆಚ್ಚಳವಾಗುತ್ತಿದೆ. ಸಾವಿರಾರು ಮಕ್ಕಳು ಕೊಲ್ಲಲ್ಪಟ್ಟ ಯುದ್ಧದಲ್ಲಿ ಜಯ ಎಂಬುದು ಯಾರದ್ದೂ ಆಗಿರುವುದಿಲ್ಲ ಎಂದು ಸಮಿತಿ ತಿಳಿಸಿದೆ.



Join Whatsapp