ಭೋಪಾಲ್: ಪ್ರಜ್ಞೆ ತಪ್ಪಿದ ಹಾವಿನ ತನ್ನ ಬಾಯಿ ಸೇರಿಸಿ ಸಿಪಿಆರ್ ಕೊಟ್ಟು ಪ್ರಾಣ ಉಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಕಾನ್ಸ್ ಟೇಬಲ್ ಅತುಲ್ ಶರ್ಮಾ ಎಂಬವರು ಈ ಸಾಹಸ ಮತ್ತು ಮಾನವೀಯ ಕಾರ್ಯ ಶ್ಲಾಘನೆಗೆ ಕಾರಣವಾಗಿದೆ.
ವಿಷಕಾರಿಯಲ್ಲದ ಹಾವೊಂದು ವಸತಿ ಪ್ರದೇಶದ ಪೈಪ್‌ಲೈನ್‌ಗೆ ಯೊಳಗೆ ನುಗ್ಗಿತ್ತು.ಇದನ್ನು ಹೊರ ತೆಗೆಯುವ ಭರದಲ್ಲಿ ಅಲ್ಲಿನ ಜನರು ಪೈಪ್ ನೊಳಗೆ ಕ್ರಿಮಿನಾಶಕವನ್ನು ಸುರಿದಿದ್ದಾರೆ. ಇದರ ಪರಿಣಾಮ ಹಾವು ಪ್ರಜ್ಞೆತಪ್ಪಿದೆ. ಪೈಪ್ ನೊಳಗೆ ನೀರು ಹಾಕಿದಾಗ ಹಾವು ಹೊರಗೆ ಬಂದಿದೆ.
ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕಾನ್ಸ್ ಟೇಬಲ್ ಅತುಲ್ ಶರ್ಮಾ ಮತ್ತಿತರರು ಬಂದಿದ್ದಾರೆ. ಮೊದಲು ಅತುಲ್ ಶರ್ಮಾ ಹಾವು ಬದುಕಿರುವ ಬಗ್ಗೆ ಪರಿಶೀಲಿಸಿದ್ದಾರೆ. ಹಾವು ಬದುಕಿರುವುದು ದೃಢವಾದ ಬಳಿಕ ಹಾವಿನ ಬಾಯಿಗೆ ತನ್ನ ಬಾಯಿಯಿಟ್ಟು ಸಿಪಿಆರ್ ನೀಡಿ ಉಸಿರು ನೀಡಿದ್ದಾರೆ. ನಿಧಾನವಾಗಿ ಹಾವು ಚಲಿಸಲು ಆರಂಭಿಸಿದೆ. ಆ ಬಳಿಕ ಹಾವನ್ನು ಕಾಡಿಗೆ ಬಿಟ್ಟು ಬರಲಾಗಿದೆ.
#MP | #Offbeat |
— काश/if Kakvi (@KashifKakvi) October 25, 2023
CPR देकर इंसानों की जान बचाने का वीडियो आपने देखा होगा पर "साप को CPR" देकर बचाने का शायद यह देश का पहला मामला होगा !
नर्मदापुरम के सेमरी हरचंद शहर में पुलिस आरक्षक अतुल शर्मा ने सीपीआर देकर सांप की जान बचाई। pic.twitter.com/HHG5KPydOp
ಸಾಮಾನ್ಯವಾಗಿ ಹಾವಿಗೆ ಸಿಪಿಆರ್ ನೀಡುವುದು ಸಾಧ್ಯವಿಲ್ಲ. ಪ್ರಜ್ಞೆತಪ್ಪಿದ ಹಾವು ಕೆಲ ಸಮಯದ ಬಳಿಕ ತಾನಾಗಿಯೇ ಚೇತರಿಸಿಕೊಳ್ಳುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ.
ಆದರೆ ಇಡೀ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತುಲ್ ಶರ್ಮಾರವರ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಅತುಲ್ ಶರ್ಮಾ 2008ರಿಂದ ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೆ ಸುಮಾರು 500 ಹಾವುಗಳನ್ನು ರಕ್ಷಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.