ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ: ಟರ್ಕಿ ಅಧ್ಯಕ್ಷ

Prasthutha|

- Advertisement -

ಟೆಲ್ ಅವಿವ್: ಹಮಾಸ್ ವಿಮೋಚನಾ ಹೋರಾಟಗಾರ ಗುಂಪು, ಭಯೋತ್ಪಾದಕ ಸಂಘಟನೆಯಲ್ಲ, ತನ್ನ ಭೂಮಿ ಮತ್ತು ಜನರನ್ನು ರಕ್ಷಿಸಲು ಸನ್ನದ್ಧವಾಗಿದೆ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ. ಮಾತ್ರವಲ್ಲ, ಹಮಾಸ್ ವಿರುದ್ಧ ಇಸ್ರೇಲ್ ಪ್ರತೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಪಾಶ್ಚಿಮಾತ್ಯ ಶಕ್ತಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಶ್ಚಿಮ ಇಸ್ರೇಲ್‌ಗಾಗಿ ಸುರಿಸುವ ಕಣ್ಣೀರು ವಂಚನೆಯದ್ದು ಎಂದಿದ್ದಾರೆ.

ತನ್ನ ಆಡಳಿತಾರೂಢ ಎಕೆ ಪಾರ್ಟಿ ಶಾಸಕರೊಂದಿಗೆ ಮಾತನಾಡಿದ ತಯ್ಯಿಪ್ ಎರ್ಡೊಗನ್, ಇಸ್ರೇಲಿ ಮತ್ತು ಪ್ಯಾಲೆಸ್ತೀನ್ ಪಡೆಗಳ ನಡುವೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲು ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದೂ ಹೇಳಿದ್ದಾರೆ.

- Advertisement -

ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಕತಾರ್‌ನಲ್ಲಿ ಮಾತನಾಡುತ್ತಾ ಗಾಝಾದಲ್ಲಿನ ಯುದ್ಧದಲ್ಲಿ ಇಸ್ರೇಲ್ ಮಾನವೀಯತೆಯ ವಿರುದ್ಧದ ಅಪರಾಧ” ಮಾಡಿದೆ ಎಂದು ಹೇಳಿದ್ದರು.



Join Whatsapp