ದರ್ಶನ್ ಬಳಿಕ ಜಗ್ಗೇಶ್, ನಿಖಿಲ್, ರಾಕ್​​ಲೈನ್, ವಿನಯ್ ಗುರೂಜಿ ಮನೆಗಳಲ್ಲಿಯೂ ಶೋಧ

Prasthutha|

- Advertisement -

ಒಂದೇ ದಿನ ರಾಜ್ಯದ ಪ್ರಮುಖ ಸೆಲೆಬ್ರಿಟಿಗಳ ಮನೆ ಮೇಲೆ ಅರಣ್ಯಾಧಿಕಾರಿಗಳು ರೇಡ್ ಮಾಡಿದ್ದಾರೆ. ನಟ ದರ್ಶನ್ ಬಳಿಕ ನಟ ಜಗ್ಗೇಶ್, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟ ನಿಖಿಲ್ ಕುಮಾರಸ್ವಾಮಿ, ಬಿದನಗೆರೆ ಧನಂಜಯ ಗುರೂಜಿ, ವಿನಯ್ ಗುರೂಜಿ ಅವರ ವಾಸಸ್ಥಾನದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಬಿಗ್ಬಾಸ್ ಸಂತೋಷ್ ತಂದಿಟ್ಟ ಪೇಚಿಗೆ ಈ ಎಲ್ಲಾ ಸೆಲೆಬ್ರೀಟಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಹುಲಿ ಉಗುರು ಮತ್ತು ಹುಲಿ ಚರ್ಮದ ಬಳಕೆಯ ಕಾರಣಕ್ಕಾಗಿ ಸಾಲು ಸಾಲು ವಿಐಪಿಗಳು ಪೊಲೀಸ್ ರೇಡಿಗೊಳಗಾಗಿದ್ದಾರೆ‌. ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ನಿಯಮ ಉಲ್ಲಂಘಿಸಿದ ಈ ಎಲ್ಲರಿಗೂ ಈಗ ಕಾನೂನು ಕಂಟಕ ಎದುರಾಗಿದೆ.

- Advertisement -

ಬಿಗ್​ ಬಾಸ್​ ಸ್ಪರ್ಧಿ ಸಂತೋಷ್ ಬಂಧನವಾಗುತ್ತಲೇ, ದರ್ಶನ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರೋ ಚಿತ್ರ ಸಖತ್ ವೈರಲ್ ಆಗಿತ್ತು. ದರ್ಶನ್ ವಿರುದ್ಧವೂ ತನಿಖೆ ಮಾಡ್ಬೇಕು ಅನ್ನೋ ಕೂಗು ದೊಡ್ಡಮಟ್ಟದಲ್ಲಿ ಕೇಳಿಬಂತು. ಅದೇ ರೀತಿ ಸಾಮಾನ್ಯರಿಗೆ ಒಂದು ನ್ಯಾಯ, ಜಗ್ಗೇಶ್‌ಗೆ ಒಂದು ನ್ಯಾಯನಾ? ಎಂದು ಕೇಳಲಾಗಿತ್ತು.

ಕೂಡಲೇ ಅಲರ್ಟ್ ಆದ ಅರಣ್ಯಾಧಿಕಾರಿಗಳು ನಟ ದರ್ಶನ್‌ ಮನೆಗೆ ತೆರಳಿ ಸ್ವತಃ ನೋಟಿಸ್ ನೀಡಿದರು. ಅರಣ್ಯಾಧಿಕಾರಿಗಳು ಖುದ್ದು ದರ್ಶನ್ ಮುಂದೆಯೇ 2 ಗಂಟೆ ಕಾಲ ಪರಿಶೀಲನೆ ನಡೆಸಿದರು. ದರ್ಶನ್ ಬಳಿ ಇದ್ದ ಪೆಂಡೆಂಟ್‌ನ್ನು ವಶಪಡಿಸಿಕೊಂಡಿದ್ದಾರೆ.

ಅದರ ಬಳಿಕ ರಾಜ್ಯಸಭಾ ಸದಸ್ಯ ಜಗ್ಗೇಶ್‌, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಟ ನಿಖಿಲ್ ಕುಮಾರಸ್ವಾಮಿ, ಬಿದನಗೆರೆ ಧನಂಜಯ ಗುರೂಜಿ, ವಿನಯ್ ಗುರೂಜಿ ಅವರ ವಾಸಸ್ಥಾನದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp