ಪಿಥೋರಗಢ: ನದಿಗೆ ಕಾರು ಉರುಳಿದ ಪರಿಣಾಮ ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಮೃತಪಟ್ಟಿರುವ ಘಟನೆ ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಲಖನ್ ಪುರ ಬಳಿ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಳಿ ನದಿಗೆ ಬಿದ್ದ ಪರಿಣಾಮ ಬೆಂಗಳೂರಿನ ಇಬ್ಬರು, ತೆಲಂಗಾಣದ ಇಬ್ಬರು ಹಾಗೂ ಉತ್ತರಾಖಂಡದ ಇಬ್ಬರು ಸಾವನ್ನಪ್ಪಿದ್ದಾರೆ.
ಕೈಲಾಸ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದಲ್ಲಿ ಜೀವಹಾನಿಯ ಬಗ್ಗೆ ದುಃಖ ಸಂತಾಪ ವ್ಯಕ್ತಪಡಿಸಿದ್ದಾರೆ.