ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಶೋಭಾಯಾತ್ರೆ ಮಂಗಳವಾರ ಅದ್ದೂರಿಯಾಗಿ ಆರಂಭಗೊಂಡು ಇಂದು ಮುಂಜಾನೆ ಸಮಾಪನಗೊಂಡಿದೆ.
ಶಾರದೆ, ಗಣಪತಿ, ಆದಿಶಕ್ತಿ, ಹಾಗೂ ನವದುರ್ಗೆಯರ ಮೂರ್ತಿಗಳನ್ನು ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು.
ಶೋಭಾಯಾತ್ರೆಯಲ್ಲಿ ನಾರಾಯಣಗುರುಗಳ ಟ್ಯಾಬ್ಲೋಗಳ ಜತೆ 58 ಸ್ತಬ್ಧಚಿತ್ರಗಳ ಟ್ಯಾಬ್ಲೋಗಳು, ನಾನಾ ವೇಷಭೂಷಣಗಳು ಮೆರುಗನ್ನು ಹೆಚ್ಚಿಸಿತು.