ಮಧ್ಯಪ್ರಾಚ್ಯದ ಸಂಘರ್ಷ ಗಾಝಾವನ್ನೂ ದಾಟಿದರೆ ಭಾರತೀಯರಿಗೆ ಸಂಕಷ್ಟ: ಉಮರ್ ಅಬ್ದುಲ್ಲಾ

Prasthutha|

ಶ್ರೀನಗರ: ಮಧ್ಯಪ್ರಾಚ್ಯದ ಸಂಘರ್ಷದ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮಾತನಾಡಿದ್ದು, ಒಂದು ವೇಳೆ ಮಧ್ಯಪ್ರಾಚ್ಯದ ಸಂಘರ್ಷ ಗಾಝಾವನ್ನೂ ದಾಟಿ ಹರಡಿದರೆ, ಆ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನೌಕರರ ಮೇಲೆ ಅದು ಪರಿಣಾಮ ಉಂಟುಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಸಂಘರ್ಷ ಮತ್ತಷ್ಟು ಮುಂದುವರೆದರೆ ಅದು ನಮ್ಮ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ. ಆ ಪ್ರದೇಶದಲ್ಲಿ ಬೇರೆ ದೇಶದ ಮೂಲದ ಜನಸಂಖ್ಯೆಗಿಂತ ಭಾರತೀಯ ಮೂಲದವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ನಮ್ಮ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ನಾವು ಯುದ್ಧವನ್ನು ನಿಲ್ಲಿಸಲು ಬಯಸುತ್ತೇವೆ, ಬಾಂಬ್ ಸ್ಫೋಟಗಳು ಕೊನೆಯಾಗಬೇಕು. ವಿಶ್ವಸಂಸ್ಥೆ  ಮತ್ತು ಇತರ ದೇಶಗಳು ನ್ಯಾಯವನ್ನು ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಶ್ರೀನಗರದ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಬ್ದುಲ್ಲಾ,  ಯುಎನ್ ಈ ಬಗ್ಗೆ  ಮೌನವಾಗಿಲ್ಲ. ಆದರೆ ದುರದೃಷ್ಟವಶಾತ್ ಅದು ಏನು ಹೇಳುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿಲ್ಲ. ನಾನು ನೋಡಿದ ಮಟ್ಟಿಗೆ ಯುಎನ್ ಅಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದೆ, ಆದರೆ ಇಸ್ರೇಲ್ಗೆ ಯುಎಸ್, ಯುಕೆಯಿಂದ ತುಂಬಾ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.



Join Whatsapp