ಪೋರ್ಚುಗಲ್: ವಿಶ್ವದ ಅತ್ಯಂತ ಹಿರಿಯ ನಾಯಿ ಎಂದು ಖ್ಯಾತಿ ಪಡೆದು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದ ನಾಯಿ ಬೊಬಿ ಮೃತಪಟ್ಟಿದೆ.
ಮೇ 11, 1992ರಲ್ಲಿ ಜನಿಸಿದ ಬೊಬಿ ಅತ್ಯಂತ ದೀರ್ಘ ಕಾಲದವರೆಗೆ ಬದುಕಿತ್ತು. ಮೃತಪಟ್ಟ ವೇಳೆ ಬೊಬಿಗೆ 31 ವರ್ಷ 165 ದಿನಗಳಾಗಿತ್ತು ಎಂದು ಮಾಲೀಕ ಲಿಯೊನಲ್ ಕೋಸ್ಟಾ ತಿಳಿಸಿದ್ದಾರೆ.
ವಿಶ್ವದ ಅತ್ಯಂತ ಹಳೆಯ ಜೀವಂತ ನಾಯಿ ಎಂದು ಖ್ಯಾತಿ ಪಡೆದಿದ್ದ ಬೊಬಿ, ಆಸ್ಟ್ರೇಲಿಯಾದ ನಾಯಿ ಬ್ಲೂಯ್ ದಾಖಲೆಯನ್ನು ಮುರಿದಿತ್ತು. ಬ್ಲೂಯ್ 29 ವರ್ಷ ಬದುಕಿತ್ತು.