ವಾಹನ ಚಾಲನೆ ವೇಳೆ ನಿದ್ರೆಗೆ ಜಾರುವ ಅಭ್ಯಾಸವೇ?: ’ಜೀವ ರಕ್ಷಕ ಕನ್ನಡಕ’ ಆವಿಷ್ಕರಿಸಿದ ವಿದ್ಯಾರ್ಥಿನಿ ರಬೀಯಾ ಫಾರೂಕಿ

Prasthutha|

►ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಹುಬ್ಬಳ್ಳಿ ವಿದ್ಯಾರ್ಥಿನಿಯ ಸಾಧನೆ

- Advertisement -


ಹುಬ್ಬಳ್ಳಿ: ವಾಹನ ಚಾಲನೆ ವೇಳೆ ಚಾಲಕ ತೂಕಡಿಸಿ ಅದೆಷ್ಟೋ ಜೀವಗಳು ಬಲಿಯಾಗಿವೆ. ಇದನ್ನು ದೂರ ಮಾಡಲು ಜೀವ ರಕ್ಷಕ ಕನ್ನಡಕವನ್ನು ಹುಬ್ಬಳ್ಳಿಯ ವಿದ್ಯಾರ್ಥಿನಿ ರಬೀಯಾ ಫಾರೂಕಿ ಕಂಡು ಹಿಡಿದಿದ್ದಾರೆ.


ಇನ್ನು ವಿದ್ಯಾರ್ಥಿಗಳು ಓದುವಾಗ ನಿದ್ರೆಗೆ ಜಾರಿದ್ರೂ ಇದು ಎಚ್ಚರಿಸುತ್ತೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರನ್ನೂ ಅಲರ್ಟ್ ಮಾಡುತ್ತಂತೆ. ಅದೇ ಆ್ಯಂಟಿ ಸ್ಲೀಪ್ ಡ್ರೌಸಿನೆಸ್ ಪ್ರಿವೆಂಟರ್ ಮಷಿನ್. ಪಾರದರ್ಶಕ ಕನ್ನಡಕಕ್ಕೆ ಚಾರ್ಜೇಬಲ್ ಬ್ಯಾಟರಿ , ಸಿಬ್ ಭಝರ್ ಹಾಗೂ ಐಆರ್ ಸೆನ್ಸಾರ್ ಅಳವಡಿಸಿದ್ದಾಳೆ. ವಾಹನ ಚಾಲನೆ ಮಾಡುವಾಗ ಆಕಸ್ಮಾತ್ ಕಣ್ಣು ಮುಚ್ಚಿದ್ರೆ, ಕ್ಷಣಾರ್ಧದಲ್ಲಿ ನ್ಯಾನೋ ಅರ್ಡುನೋ ಭಝರ್ ರಿಂಗಣಿಸಿ ಚಾಲಕನನ್ನು ಎಚ್ಚರಿಸುತ್ತೆ.

- Advertisement -


ರಬಿಯಾ ಫಾರೂಕಿ ಸದ್ಯ ವಿದ್ಯಾನಿಕೇತನ್ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರೂಬಿಯಾ ಅವರು ಕಂಡು ಹಿಡಿದ ಕನ್ನಡಕ ಇದೀಗ ದೆಹಲಿಯಲ್ಲಿ ನಡೆದ ಇನ್ಸ್ಪೈರ್ ಅವಾರ್ಡ್ ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟದ ಉತ್ತಮ ಮಾದರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದಲ್ಲದೆ ರೂಬಿಯಾ ಕಂಡು ಹಿಡಿದ ಈ ಕನ್ನಡಕ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರದರ್ಶನಕ್ಕೂ ಆಯ್ಕೆಯಾಗಿದೆ.



Join Whatsapp