ಗಾಝಾಗೆ ನೆರವು ನೀಡುವಂತೆ ಫುಟ್ಬಾಲ್ ಆಟಗಾರ ಮುಹಮ್ಮದ್ ಸಲಾಹ್ ಕರೆ

Prasthutha|

ಇಸ್ರೇಲಿ-ಹಮಾಸ್ ಸಂಘರ್ಷದಲ್ಲಿ ಹತ್ಯಾಕಾಂಡಗಳನ್ನು ನಿಲ್ಲಿಸಬೇಕು ಮತ್ತು ಗಾಝಾಕ್ಕೆ ತಕ್ಷಣದ ಮಾನವೀಯ ಸಹಾಯವನ್ನು ಅನುಮತಿಸಬೇಕು ಎಂದು ಲಿವರ್ಪೂಲ್ ಹಾಗೂ ಈಜಿಪ್ಟ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಮುಹಮ್ಮದ್ ಸಲಾಹ್ ಮನವಿ ಮಾಡಿದ್ದಾರೆ.

- Advertisement -


ಗಾಝಾ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ಸಂಭವಿಸಿದ ಬೃಹತ್ ಸ್ಫೋಟದಲ್ಲಿ ಐನೂರಕ್ಕೂ ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ. ಆದರೆ ನೀರು ಮತ್ತು ಆಹಾರದ ಪೂರೈಕೆ ಮುಗಿದಿದ್ದರಿಂದ ಆತಂಕಗಳು ಹೆಚ್ಚುತ್ತಿವೆ.


ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿರುವ ಸಲಾಹ್, ಆಸ್ಪತ್ರೆಯಲ್ಲಿನ ದೃಶ್ಯಗಳನ್ನು “ಭಯಾನಕ” ಎಂದು ಕರೆದರು ಮತ್ತು “ಮುಗ್ಧ ಹತ್ಯೆಯನ್ನು ತಡೆಗಟ್ಟಲು” ನಾಯಕರು ಒಗ್ಗೂಡಬೇಕು ಎಂದು ಹೇಳಿದರು.

- Advertisement -


ಇಂತಹ ಸಂದರ್ಭದಲ್ಲಿ ಮಾತನಾಡುವುದು ಸುಲಭವಲ್ಲ. ಸಾಕಷ್ಟು ಹಿಂಸಾಚಾರ ಮತ್ತು ಹೃದಯವಿದ್ರಾವಕ ಹಾಗೂ ಕ್ರೂರ ಕೃತ್ಯಗಳು ನಡೆಯುತ್ತಿವೆ” ಎಂದು 6.27 ಕೋಟಿ ಅನುಯಾಯಿಗಳನ್ನು ಹೊಂದಿರುವ ಸಲಾಹ್ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ.

Join Whatsapp