ಮಂಗಳೂರು,: ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುದ್ವೇಷ ಭಾಷಣ, ವ್ಯಾಪಾರ ಬಹಿಷ್ಕಾರ ಮತ್ತಿತರ ಕಾನೂನುಬಾಹಿರ ಕೃತ್ಯ ಗಳಿಂದ ಶಾಂತಿ ಕದಡುವ ಸಾಧ್ಯತೆ ಇದೆ. ಯಾವ ಕಾರಣಕ್ಕೂ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಲು ಅವಕಾಶ ನೀಡಬಾರದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಇದರ ನಿಯೋಗವು ನಗರದ ಬಂದರ್ ಪೊಲೀಸ್ ಠಾಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ..ಶಾಂತಿಯನ್ನು ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದೆ.
ಇತ್ತೀಚೆಗೆ ಹಮಾಸ್ ಪರ ವೀಡಿಯೋವನ್ನು ಹರಿಯಬಿಟ್ಟ ಕಾರಣಕ್ಕಾಗಿ ಬಂಧನಕ್ಕೊಳಗಾದ ಝಾಕೀರ್ ಬಂದರ್ ಬಗ್ಗೆ ನಿಯೋಗವು ಮಾಹಿತಿಯನ್ನು ಪಡೆದುಕೊಂಡಿತು.
ನಿಯೋಗದಲ್ಲಿ ಎಂಜೆಎಫ್ ಸ್ಥಾಪಕಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಪ್ರಧಾನ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಉಪಾಧ್ಯಕ್ಷರಾದ ಇಕ್ಬಾಲ್ ಸಾಮಾಣಿಗೆ, ಅಲಿ ಹಸನ್, ಸದಸ್ಯರಾದ ಆಸೀಫ್ ಬೆಂಗ್ರೆ, ಎಆರ್ ಇಮ್ರಾನ್, ಇದಿನಬ್ಬ ಬಂದರ್ ಉಪಸ್ಥಿತರಿದ್ದರು.