ಮಂಗಳೂರು: ಜಾತ್ರೆಯಲ್ಲಿ ಹಿಂದೂ ವ್ಯಾಪಾರಿಗಳ ಮಳಿಗೆಗಳಲ್ಲಿ ಭಗವಾಧ್ವಜ

Prasthutha|

ಮಂಗಳೂರು: ನಗರದ ಮಂಗಳಾದೇವಿ ದೇವಸ್ಥಾನ ನವರಾತ್ರಿ ಜಾತ್ರೆಯಲ್ಲಿ ಹಿಂದೂಯೇತರರಿಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ವಿಶ್ವ ಹಿಂದೂ ಪರಿಷತ್‌ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘದವರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದುವರೆದು, ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಬಳಿ ನಿರ್ಮಿಸಿರುವ ಮಳಿಗೆಗಳಿಗೆ ಶರಣ್‌ ಪಂಪ್‌ವೆಲ್‌ ತಂಡ   ಭಗವಾಧ್ವಜ ಕಟ್ಟಿದ್ದು, ಮಳಿಗೆ ದೇವಸ್ಥಾನ ಪಕ್ಕ  ವ್ಯಾಪಾರ ಅವಕಾಶ ಹಿಂದುಗಳಿಗೆ ಮಾತ್ರ ಎಂದು ಹೇಳಿದ್ಧಾರೆ

- Advertisement -

ಇಲ್ಲಿ ಹರಾಜಿನಲ್ಲಿ ಮಳಿಗೆಗಳನ್ನು ಪಡೆದ ಮುಸ್ಲಿಂ ವ್ಯಾಪಾರಿಗಳ ಬಳಿ ಹಿಂದೂಗಳು ವ್ಯಾಪಾರ ನಡೆಸುವುದನ್ನು ತಡೆಯಲು ಹಿಂದೂಗಳ ಮಳಿಗೆಗಳಲ್ಲಿ ಭಗವಾಧ್ವಜಗಳನ್ನು ಕಟ್ಟಿದ್ದಾರೆ.  ಭಗವಾಧ್ವಜ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಸುವಂತೆ ಹಿಂದೂಗಳಿಗೆ ಸಂದೇಶ ರವಾನಿಸಿದ್ದಾರೆ.

ಹಿಂದೂ ಜಾತ್ರೆಗಳ ಸಂದರ್ಭದಲ್ಲಿ ದೇವಸ್ಥಾನದ ಬಳಿ ಅವರು ವ್ಯಾಪಾರ ನಡೆಸುವುದಕ್ಕಷ್ಟೇ ನಮ್ಮ ವಿರೋಧ. ಹಿಂದೂಗಳ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಸುವಂತೆ ನಾವು ನಮ್ಮ ಧರ್ಮದವರ ಮನವೊಲಿಸುತ್ತೇವೆ. ನಮ್ಮವರ ಮಳಿಗೆಗಳನ್ನು ಗುರುತಿಸಲು ಭಗವಾಧ್ವಜ ಕಟ್ಟಿದ್ದೇವೆ ಎಂದು ಶರಣ್ ಪಂಪ್ವೆಲ್ ಹೇಳಿದ್ಧಾರೆ.

- Advertisement -

ಈ ದೇವಸ್ಥಾನದ ಬಳಿ 125 ಮಳಿಗೆಗಳನ್ನು ಹರಾಜು ಮಾಡಲಾಗಿದೆ. ಆರು ಮಳಿಗೆಗಳನ್ನು ಮುಸ್ಲಿಮರು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. 

ಆರಂಭದಲ್ಲಿ ಇಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದವರಿಗೆ ಮಾತ್ರ ಮಳಿಗೆಗಳನ್ನು  ಹಂಚಿಕೆ ಮಾಡಲಾಗಿತ್ತು. ಇದಕ್ಕೆ  ಬೀದಿ ಬದಿ ವ್ಯಾಪಾರಸ್ಥರ ಸಂಘದವರು ವಿರೋಧ ವ್ಯಕ್ತಪಡಿಸಿದ ಬಳಿಕ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿತ್ತು. ಮತ್ತಷ್ಟು ಮಳಿಗೆಗಳನ್ನು ಹಂಚಿಕೆ ಮಾಡುವಾಗ ಮುಸ್ಲಿಮರು ಹರಾಜಿನಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶ ಕಲ್ಪಿಸಿತ್ತು. 



Join Whatsapp