ಬಂಟ್ವಾಳ ಪುರಸಭೆ ಅನುದಾನದಲ್ಲಿ ತಾರತಮ್ಯ: ಎಸ್‌ಡಿಪಿಐ ಒತ್ತಡಕ್ಕೆ ಮಣಿದ ಅಧಿಕಾರಿಗಳು

Prasthutha|

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿ 13 ಮತ್ತು 14ನೇ ವಾರ್ಡಿಗೆ ಮೀಸಲಿಟ್ಟ ಅನುದಾನದಲ್ಲಿ ಪುರಸಭೆ ಅಧಿಕಾರಿಗಳು ತಾರತಮ್ಯ ಮಾಡಿರುವ ಬಗ್ಗೆ ಬಂಟ್ವಾಳ ಪುರಸಭೆಯ ಎಸ್ ಡಿ ಪಿ ಐ ಸದಸ್ಯರುಗಳಾದ ಝೀನತ್ ಹಾಗೂ ಸಂಶಾದ್‌ರ ನೇತೃತ್ವದಲ್ಲಿ ಪಕ್ಷದ ನಾಯಕರೊಂದಿಗೆ ನಿಯೋಗವು ಧರಣಿ ನಡೆಸಲು ಸಿದ್ಧತೆ ನಡೆಸಿತ್ತು. ಪುರಸಭಾ ಸದಸ್ಯರಿಗಾದ ತಾರತಮ್ಯಕ್ಕೆ ವಿಷಾದ ವ್ಯಕ್ತಪಡಿಸಿದ ಮುಖ್ಯಾಧಿಕಾರಿ ಮತ್ತು ಇಂಜಿನಿಯರ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಾರ್ಡ್ ಅಭಿವೃದ್ಧಿಗೆ ಅನುದಾನ ಒದಗಿಸುವುದಾಗಿ ಮತ್ತು ಗುಡ್ಡೆಜರಿತ ತಡೆಯಲು ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ ಬಳಿಕ ಧರಣಿ ಕೈ ಬಿಡಲಾಯಿತು.

- Advertisement -


ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಮೂನಿಷ್ ಆಲಿ, ಇದ್ರೀಸ್ ಪಿಜೆ, ಮಾಜಿ ಪುರಸಭಾ ಉಪಾಧ್ಯಕ್ಷರಾದ ಇಕ್ಬಾಲ್ ಐಎಂಆರ್, ಎಸ್‌ಡಿಪಿಐ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು, ಸಮಿತಿ ಸದಸ್ಯರಾದ ಶಾಹುಲ್ ಎಸ್ ಎಚ್, ಪುರಸಭಾ ಸಮಿತಿ ಸದಸ್ಯರಾದ ಅನ್ಸಾರ್ ಗೂಡಿನಬಳಿ, ಬೂತ್ ಅಧ್ಯಕ್ಷರುಗಳಾದ ಅನ್ವರ್ ಹಾಗೂ ನಿಸಾರ್, ಕಾರ್ಯದರ್ಶಿ ಫಿರೋಜ್ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.



Join Whatsapp