ಇಸ್ರೇಲ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಲು ಇರಾನ್ ಕರೆ

Prasthutha|

ಟೆಹರಾನ್: ಅರಬ್ ದೇಶಗಳು ಮುಂತಾದ ಇಸ್ಲಾಮಿಕ್ ದೇಶಗಳು ಇಸ್ರೇಲ್ ವಿರುದ್ಧ ಒಂದಾಗಬೇಕು ಎಂದು ಇರಾನ್ ಕರೆ ನೀಡಿದೆ.

- Advertisement -

ಆದರೆ, ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಇರಾನ್ ಹೇಳಿದೆ.

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸದ್ ಅವರಿಗೆ ಕರೆ ಮಾಡಿ ಇಸ್ರೇಲ್ ವಿರುದ್ಧ ತಮ್ಮೊಂದಿಗೆ ಇರಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

- Advertisement -

‘ಇಸ್ರೇಲ್ ಆಡಳಿತವು ದೌರ್ಜನ್ಯಕ್ಕೆ ಗುರಿಯಾಗಿರುವ ಪ್ಯಾಲೆಸ್ಟೀನ್ ದೇಶದ ವಿರುದ್ಧ ನಡೆಸುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಎಲ್ಲ ಇಸ್ಲಾಮಿಕ್ ಹಾಗೂ ಅರಬ್ ದೇಶಗಳು ಒಂದಾಗಬೇಕು’ ಎಂದು ರೈಸಿ ಅವರು ಹೇಳಿದ್ದಾರೆ ಎನ್ನಲಾಗಿದೆ.

ಇಸ್ರೇಲ್ ದೇಶವು ಪ್ಯಾಲೆಸ್ಟೀನ್ ಜನರ ಹತ್ಯೆಯಲ್ಲಿ ತೊಡಗಿದೆ ಎಂದು ರೈಸಿ ದೂರಿದ್ದಾರೆ. ಇರಾನ್ ದೇಶವು ಎಲ್ಲ ಇಸ್ಲಾಮಿಕ್ ದೇಶಗಳ ಜೊತೆ ಸಾಧ್ಯವಾದಷ್ಟು ಬೇಗನೆ ಸಮನ್ವಯದಿಂದ ಕೆಲಸ ಮಾಡಲಿದೆ ಎಂದೂ ಇರಾನ್‌ನ ಅಧ್ಯಕ್ಷರ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.



Join Whatsapp