ಮಂಗಳಾ ದೇವಿ ಸಂತೆ ಸ್ಥಳ ಪಾಲಿಕೆಯದ್ದು, ಸರ್ವ ಧರ್ಮೀಯ ವರ್ತಕರಿಗೆ ಸೇರಿದ್ದು: ಕೆ.ಅಶ್ರಫ್

Prasthutha|

ಮಂಗಳೂರು: ಮಂಗಳಾ ದೇವಿ ದಸರಾ ಜಾತ್ರೆ ಮಹೋತ್ಸವದ ಸಂದರ್ಭದ ಸಂತೆ ಸ್ಥಳ ಪಾಲಿಕೆಗೆ ಸೇರಿದ್ದು, ಸರ್ವ ಧರ್ಮೀಯ ವರ್ತಕರಿಗೆ ಸೇರಿದ್ದು. ಆದ್ದರಿಂದ ಮಂಗಳೂರು ಮಹಾ ನಗರ ಪಾಲಿಕೆ ಆದ್ಯತೆಯ ಆಧಾರದಲ್ಲಿ ವರ್ತಕ ಸ್ಟಾಲ್ ( ಮುಂಗಟ್ಟು) ಗಳನ್ನು ಏಲಂ ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಬೇಕಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಯಾವುದೇ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಸಂತೆ ವರ್ತಕ ಚಟುವಟಕೆಗಳನ್ನು ಕೋಮು ಭಾವನೆಯಲ್ಲಿ ತಾರತಮ್ಯಗೊಳಿಸಿದರೆ ಸ್ಥಳೀಯ ಆರ್ಥಿಕ ಚಟುವಟಿಕೆ ಸ್ಥಗಿತ ಗೊಳ್ಳುವ ಅಪಾಯವಿದೆ. ಸಂತೆ ಸ್ಥಳವನ್ನು ಮತೀಯ ವರ್ತಕರ ಸಂಘಟನೆ ಸ್ಥಾಪಿಸುವ ಮೂಲಕ ಸಾಮೂಹಿಕವಾಗಿ ವರ್ತಕ ಸಮುದಾಯಕ್ಕೆ ನಿಷೇಧ ಹೇರಿದರೆ ಅದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

ಮಂಗಳಾ ದೇವಿ ಉತ್ಸವದ ಪ್ರಕ್ರಿಯೆಯನ್ನು ಗೌರವಿಸುವುದರೊಂದಿಗೆ ಸರ್ವ ಧರ್ಮೀಯರ ವರ್ತಕ ಹಕ್ಕುಗಳನ್ನು ಪಾಲಿಸಲು ಆಡಳಿತ ಮಂಡಳಿ ನಿರ್ಧರಿಸಬೇಕಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರೂ ಆದ ಕೆ. ಅಶ್ರಫ್ ಆಗ್ರಹಿಸಿದ್ದಾರೆ.