ಗೋಹತ್ಯೆ ನಿಷೇಧ ವಿಧೇಯಕ | ಪರಿಷತ್ ನಲ್ಲಿ ಸರಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ : ಕಾಂಗ್ರೆಸ್ ಕಿಡಿ

Prasthutha|

ಬೆಂಗಳೂರು : ಗೋಹತ್ಯೆ ನಿಷೇಧ ವಿದೇಯಕಕ್ಕೆ ವಿಚಾರದಲ್ಲಿ ಆಡಳಿತ ಪಕ್ಷದ ವರ್ತನೆಯಿಂದ ಸದನದ ಕಾರ್ಯಕಲಾಪ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

- Advertisement -

ನಿನ್ನೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ನಡೆಯುತಿತ್ತು. ವಂದನಾ ನಿರ್ಣಯದ ಚರ್ಚೆಯ ಅವಧಿ ಮೊಟಕುಗೊಳಿಸಿ, ಗೋಹತ್ಯೆ ನಿಷೇಧ ವಿಧೇಯಕ ತೆಗೆದಯಕೊಂಡರು. ಇದರ ತುರ್ತು ಅಗತ್ಯ ಏನಿತ್ತು? ಏಕಾಏಕಿ ಉಪಸಭಾಪತಿ ಮಸೂದೆ ಅಂಗೀಕಾರ ಮಾಡಿದ್ದಾರೆ ಎಂದು ಅವರು ಆಪಾದಿಸಿದರು.

ಈ ಮೂಲಕ ಸದನದ ನಿಯಮ ಗಾಳಿಗೆ ತೂರಿದ್ದಾರೆ. ಯಾವುದೋ ಜನಾಂಗದ ಓಲೈಕೆಗಾಗಿ ಮಸೂದೆ ಜಾರಿಗೊಳಿಸಲಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

- Advertisement -

ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹೀಂ, ನಾನು ಕಾಂಗ್ರೆಸಿಗ, ಕಾಂಗ್ರೆಸ್ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧ, ಇತರ ರಾಜಕೀಯ ಮುಖಂಡರೊಡನೆ ಸಂಬಂಧ ಕೇವಲ ವೈಯಕ್ತಿಕ ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ಬಿಲ್ ವಿರೋಧಿಸಿದ ಜೆಡಿಎಸ್ ಕೂಡ ರಾಜ್ಯಪಾಲರಿಗೆ ದೂರು ಕೊಟ್ಟು ಬದ್ಧತೆ ತೋರಲಿ, ಇಲ್ಲದಿದ್ದರೆ ಜೆಡಿಎಸ್ ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಗೊತ್ತಾಗುತ್ತದೆ ಎಂದು ಪರಿಷತ್ ಸದಸ್ಯ ನಝೀರ್ ಅಹ್ಮದ್ ತಿಳಿಸಿದರು.  

ಮೋದಿಯವರ ಕಾರ್ಪೊರೇಟ್ ಸಂಸ್ಥೆಗಳ ಉದ್ಧಾರಕ್ಕೆ ಈ ಬಿಲ್ ತಂದಿದ್ದಾರೆ. ಬೀಫ್ ಮಾರಾಟ ಮಾಡಲು, ತಿನ್ನಲು ನಿಷೇಧ ಹೇರದ ದ್ವಂದ್ವ ನಿಲುವಿನ ಬಿಜೆಪಿ ಸರಕಾರ, ಬೀಫ್ ರಫ್ತು ನಿಷೇಧಿಸುವ ಧೈರ್ಯ ತೋರಲಿ ಎಂದು ಪರಿಷತ್ ಸದಸ್ಯ ಪಿ.ಆರ್. ರಮೇಶ್ ಹೇಳಿದರು.



Join Whatsapp