ಹೊಸದಿಲ್ಲಿ: ಚಂದ್ರನಲ್ಲಿ ರಾತ್ರಿ ಅಂತ್ಯವಾಗಿದ್ದು (ಚಂದ್ರನ ಒಂದು ದಿನ ಭೂಮಿಯ 14 ದಿನಕ್ಕೆ ಸಮ), ಸೂರ್ಯೋದಯವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿದ್ರೆಯಲ್ಲಿರುವ ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಳಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಆದರೆ ಲ್ಯಾಂಡರ್ ಮತ್ತು ರೋವರ್ನಿಂದ ಇದುವರೆಗೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ.
ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎಚ್ಚರಗೊಳ್ಳುವ ಸ್ಥಿತಿ ಖಚಿತಪಡಿಸಿಕೊಳ್ಳಲು, ಸಂವಹನ ಸ್ಥಾಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಎಕ್ಸ್ನಲ್ಲಿ ತಿಳಿಸಿದೆ.
ಎರಡು ವಾರಗಳ ಚಂದ್ರನ ರಾತ್ರಿಯಿಂದಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್ನಲ್ಲಿ ಇರಿಸಲಾಗಿತ್ತು. ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಬೆಳಕಾಗಿದ್ದು, ಸಂಪರ್ಕ ಸ್ಥಾಪಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.