ನ್ಯಾಯದಾನ | ಬಿಜೆಪಿಗಿಂತ‌ ಇತರ ಪಕ್ಷಗಳ ಆಳ್ವಿಕೆಯ ರಾಜ್ಯಗಳೇ ಮುಂದೆ | ವರದಿ

Prasthutha|

- Advertisement -

ಜನರಿಗೆ ನ್ಯಾಯ ದೊರಕಿಸಿಕೊಡುವ ದೃಷ್ಟಿಯಿಂದ ಬಿಜೆಪಿ ಆಳುವ ರಾಜ್ಯಗಳಿಗಿಂತ ಇತರ ಪಕ್ಷಗಳು ಆಳುವ ರಾಜ್ಯಗಳು ಉತ್ತಮವಾಗಿವೆ ಎಂದು ಟಾಟಾ ಟ್ರಸ್ಟ್‌ನ ‘ಇಂಡಿಯಾ ಜಸ್ಟೀಸ್ ರಿಪೋರ್ಟ್ 2020’ ವರದಿ ಮಾಡಿದೆ. 18 ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಪಂಜಾಬ್ ಮತ್ತು ಕೇರಳ ಮೊದಲ ಐದು ಸ್ಥಾನಗಳಲ್ಲಿವೆ. ವರದಿಯ ಪ್ರಕಾರ, ಉತ್ತರ ಪ್ರದೇಶವು ದೇಶದ ಅತ್ಯಂತ ಕೆಟ್ಟ ನ್ಯಾಯ ವ್ಯವಸ್ಥೆಯನ್ನು ಹೊಂದಿದೆ.

ಆರನೇ ಸ್ಥಾನದಲ್ಲಿರುವ ಗುಜರಾತ್ ಈ ಪಟ್ಟಿಯಲ್ಲಿ ‘ಅತ್ಯುತ್ತಮ’ ಬಿಜೆಪಿ ರಾಜ್ಯವಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಾದ ಮಧ್ಯಪ್ರದೇಶ, ಕರ್ನಾಟಕ ಮತ್ತು ಹರಿಯಾಣಗಳು 2019 ರ ಮೊದಲ ಆವೃತ್ತಿಯ ಶ್ರೇಯಾಂಕಕ್ಕಿಂತ ಹಿಂದೆ ಹೋಗಿದೆ. ಬಿಜೆಪಿ ಅಧಿಕಾರದಲ್ಲಿರದ ಚತ್ತೀಸ್ಗಢ, ಜಾರ್ಖಂಡ್ ಮತ್ತು ರಾಜಸ್ಥಾನ ಈಗ ಸುಧಾರಿಸಿದೆ. ಬಿಜೆಪಿಯೇತರ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾ ಹಿಂದಕ್ಕೆ ಜಾರಿದೆ.

Join Whatsapp