ಗೌರಿ ಹಂತಕರನ್ನು ಶಿಕ್ಷಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳುವುದು ಹಾಸ್ಯಾಸ್ಪದ

Prasthutha|

ಪತ್ರಕರ್ತ ನವೀನ್ ಸೂರಿಂಜೆ ಫೇಸ್ ಬುಕ್ ಪೋಸ್ಟ್

- Advertisement -

ಗೌರಿ ಕೊಲೆಯಾದುದು ಸಿದ್ದಾಂತದ ಕಾರಣಕ್ಕೆ. ಗೌರಿ ಒಬ್ಬರೇ ಕೊಲೆಗಾರರ ಟಾರ್ಗೆಟ್ ಅಲ್ಲ. ಕರ್ನಾಟಕದ 52 ಬುದ್ದಿಜೀವಿಗಳು, ತಮಿಳುನಾಡಿನ 30 ಬುದ್ದಿಜೀವಿಗಳು ಟಾರ್ಗೆಟ್ ಆಗಿದ್ದರು. ಕೊಲೆಗಾರರಿಗೂ ಗೌರಿ ಸೇರಿದಂತೆ ಈ 82 ಬುದ್ದಿಜೀವಿಗಳಿಗೂ ವೈಯುಕ್ತಿಕ ಸಂಬಂಧವೂ ಇಲ್ಲ, ಪರಿಚಯವೂ ಇಲ್ಲ. ಆದರೂ ಕೊಲೆಯಾಗಿದ್ದು, ಟಾರ್ಗೆಟ್ ಆಗಿರುವುದು ಯಾಕೆ ಎಂದರೆ ಸೈದ್ದಾಂತಿಕ ಕಾರಣಕ್ಕಾಗಿ. ಈ ಕೊಲೆ ರಾಜಕಾರಣವನ್ನು ಸಂಘಟಿತವಾಗಿ ಮಾಡಲಾಗಿದೆ. ಪರಿಚಯ ಮತ್ತು ಸಂಬಂಧ ಇಲ್ಲದ ಈ ಕೊಲೆಗಾರ ಯುವಕರನ್ನು ಸಂಘಟಿಸಿದ್ದು ಯಾರು ? ಆ ಸಂಘಟನೆಯ ಪ್ರಮುಖರನ್ನು ಯಾಕೆ ಬಂಧಿಸಿಲ್ಲ ? ಕೇವಲ ಕಾಲಾಳುಗಳನ್ನು ಬಂಧಿಸಿದರೆ ಸಾಕೆ ? ಒಬ್ಬ ಮುಸ್ಲಿಂ ಯಾವುದಾದರೂ ಕೃತ್ಯ ಮಾಡಿದಾಗ ಆತನ ಹಿಂದೆ “ಸಂಘಟನೆ” ಇದೆಯಾ ಎಂದು ಹುಡುಕುವ ಪೊಲೀಸರು ಗೌರಿ ಕೇಸ್ ನಲ್ಲಿ ಯಾಕೆ ಹಿಂದೂ ಸಂಘಟನೆಗಳನ್ನು ಹೊಣೆ ಮಾಡಿಲ್ಲ ? ಗೌರಿ ಹತ್ಯೆಯಲ್ಲಿ ಭಾಗಿಯಾದುದಲ್ಲದೆ 80 ಕ್ಕೂ ಅಧಿಕ ಜನರನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ ಕ್ರೂರಿ, ದೇಶದ್ರೋಹಿ ಸಂಘಟನೆಯನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗಿದೆಯೇ ? ಇಂತಹ ಹಿಂದೂ ಸಂಘಟನೆಯನ್ನು ಇಂತಹ ಕಾರಣಕ್ಕಾಗಿ ದೇಶದಾದ್ಯಂತ ಬ್ಯಾನ್ ಮಾಡಿ ಎಂದು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆಯೇ ? ಪಿಎಫ್ಐಗೆ ಒಂದು ನ್ಯಾಯ, ಹಿಂದುತ್ವ ಸಂಘಟನೆಗಳಿಗೊಂದು ನ್ಯಾಯವೇ ? ಗೌರಿ ಕೊಲೆ ಕೇಸ್ ನಲ್ಲಾದರೂ ಹಿಂದುತ್ವ ಸಂಘಟನೆಗಳ ಮೇಲೆ ಕ್ರಮ ಆಗದೇ ಇದ್ದರೆ ಅದು ಹೇಗೆ ಗೌರಿಗೆ ನ್ಯಾಯ ಕೊಟ್ಟಂತಾಗುತ್ತದೆ ?

ಎರಡನೆಯದ್ದು, ಗೌರಿ ಚಾರ್ಜ್ ಶೀಟ್ ನಲ್ಲಿ 530 ಸಾಕ್ಷಿಗಳನ್ನು ಗುರುತಿಸಲಾಗಿದೆ. ಈಗ ಐದು ವರ್ಷ ಕಳೆದಿದೆ. ಐದು ವರ್ಷದಲ್ಲಿ ಕೇವಲ 83 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ. ಐದು ವರ್ಷಕ್ಕೆ ಸರಾಸರಿ 100 ಸಾಕ್ಷಿ ವಿಚಾರಣೆ ಅಂದುಕೊಂಡರೂ 530 ಸಾಕ್ಷಿಗಳ ವಿಚಾರಣೆಗೆ 25 ವರ್ಷ ಬೇಕೆ ? ಇದ್ಯಾವ ನ್ಯಾಯ ವ್ಯವಸ್ಥೆ ?
ಇವೆಲ್ಲವನ್ನು ಸರಿಪಡಿಸುವ ಜಾಗದಲ್ಲಿ ಸಿದ್ದರಾಮಯ್ಯರಿದ್ದಾರೆ.



Join Whatsapp