ಚಿತ್ರದುರ್ಗ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ವಿಮಾನ

Prasthutha|

- Advertisement -

ಚಿತ್ರದುರ್ಗ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (DRDO) ಸಿದ್ಧಪಡಿಸಿದ್ದ ಚಾಲಕ ರಹಿತ ತಪಸ್ ವಿಮಾನವೊಂದು ಕೃಷಿ ಜಮೀನಿನಲ್ಲಿ ಧರೆಗುರುಳಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್‌ಡಿಒ ಈ ವಿಮಾನವನ್ನು ಸಿದ್ಧಪಡಿಸಿತ್ತು.

- Advertisement -

ಡ್ರೋನ್ ಮಾದರಿಯ ತಪಸ್ ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವದ್ದಿಕೆರೆ ಬಳಿಕ ಜಮೀನಿನಲ್ಲಿ ಬಿದ್ದಿದೆ.



Join Whatsapp